ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರಿಂದ ಶಾಸಕ ಪೊನ್ನಣ್ಣಗೆ ಗೌರವ
admincoorgdaily

ಮಡಿಕೇರಿ: ಮಡಿಕೇರಿ ತಾಲೂಕು ಕಡಂಗ ಗ್ರಾಮದ ಅರಪಟ್ಟು ಭಾಗದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರು ವಿರಾಜಪೇಟೆ ಶಾಸಕರನ್ನು ಭೇಟಿ ಮಾಡಿ ಗೌರವ ಸಲ್ಲಿಸಿದರು.
ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಕಾರಣಕರ್ತರಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ*ಅವರನ್ನು ವಿರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ಭೇಟಿಯಾದ ಆಯೋಜಕರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಸಮ್ಮೇಳನದ ಯಶಸ್ಸಿಗೆ ಶಾಸಕರು ನೀಡಿದ ಸಹಕಾರ ಹಾಗೂ ಮಾರ್ಗದರ್ಶನಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೇಶವ್ ಕಾಮತ್, ತಾಲೂಕು ಅಧ್ಯಕ್ಷರಾದ ತುಳಸಿ ಮೋಹನ್, ಹಣಕಾಸು ಸಮಿತಿ ಅಧ್ಯಕ್ಷರಾದ ಕೊಡೀರ ವಿನೋದ್ ನಾಣಯ್ಯ ಐತ್ತಿತಂಡ ಪ್ರಕಾಶ್, ಮೊಹಮ್ಮದ್, ಸುಬೈರ್, ಸೋಮಣ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.