ವಿರಾಜಪೇಟೆ ಬೇತ್ರಿ ಹೊಳೆಯಲ್ಲಿ ಪತ್ತೆಯಾದ ಪುರುಷ ಮೃತದೇಹ!: ಯಾರಾದರೂ ಕಾಣೆಯಾಗಿದ್ದಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ
ವಿರಾಜಪೇಟೆ: 29/07/2025 ರಂದು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಬೇತ್ರಿಯ ಕಾವೇರಿ ನದಿಯಲ್ಲಿ ಒಂದು ಪುರುಷ ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಎಲ್ಲಿಂದಲೋ ನೀರಿನಲ್ಲಿ ತೇಲಿ ಬಂದು ಬಿದಿರಿನ ರೆಂಬೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಮೃತ ದೇಹವನ್ನು ಪರಿಶೀಲಿಸಿದಾಗ ಸಂಪೂರ್ಣ ಕೊಳೆತು ಹೋಗಿದ್ದು ತಲೆಯ ಚರ್ಮವು ಮಾತ್ರ ಇದ್ದು ಬುರುಡೆಯು ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ. ಅದೇ ರೀತಿ ಕಾಲಿನ ಪಾದದ ಭಾಗಗಳು ಇರುವುದಿಲ್ಲ. ಮೊಣಕಾಲಿನ ಮೂಳೆಗಳು ಮಾತ್ರ ಇರುತ್ತದೆ. ಮೃತ ದೇಹದ ಮೇಲೆ ಒಂದು ಕೆಂಪು ಬಣ್ಣದ ಅರ್ಧ ತೊಳಿನ ಟೀ ಶರ್ಟ್ ಮಾತ್ರ ಇರುತದೆ. ಮೃತ ದೇಹವನ್ನು ಮಡಿಕೇರಿಯ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗರದಲ್ಲಿ ಇರಿಸಲಾಗಿರುತದೆ. 1 ತಿಂಗಳಿಗಿಂತ ಹೆಚ್ಚಿನ ಸಮಯವಾಗಿರುವ ಸಂಭವ ವಿರುತದೆ. ಅಂದಾಜು 30 ರಿಂದ 35 ವರ್ಷದ ವಯಸ್ಸಿನಂತೆ ಕಂಡುಬರುತಿದೆ. ಯಾರಾದರೂ ಕಾಣೆಯಾಗಿದ್ದಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಿದೆ.