ಮಹಿಳೆಯ ಕುತ್ತಿಗೆಯಿಂದ‌ 10 ಗ್ರಾಂ ಚಿನ್ನದ ಸರ ಕಸಿದು ಪರಾರಿ

Apr 24, 2026 - 09:26
 0  915
ಮಹಿಳೆಯ ಕುತ್ತಿಗೆಯಿಂದ‌ 10 ಗ್ರಾಂ ಚಿನ್ನದ ಸರ ಕಸಿದು ಪರಾರಿ
ಸಾಂದರ್ಭಿಕ ಚಿತ್ರ

ಕುಶಾಲನಗರ, ಏ 24: ಮನೆಗೆ ತೆರಳುತ್ತಿದ್ದ ಮಹಿಳೆಯ ದ್ವಿಚಕ್ರ ವಾಹನ ಅಡ್ಡಗಟ್ಟಿ ಚಿನ್ನದ ಸರ ರಾಬರಿ ಮಾಡಿ ಪರಾರಿಯಾದ ಘಟನೆ ಕೊಪ್ಪ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

 ಕುಶಾಲನಗರದ ಕೂಡೂರಿನ ಎಸ್ ಎಲ್ ಎನ್‌ ಸಂಸ್ಥೆ ಉದ್ಯೋಗಿ ಶೃತಿ ಎಂಬವರು ಕೆಲಸ ಮುಗಿಸಿ ಆಸ್ಪತ್ರೆಗೆ ತೆರಳಿ ಬಳಿಕ ಗುಟ್ಟೇನಹಳ್ಳಿ ಮನೆಯತ್ತ ತೆರಳುವ ಮಾರ್ಗದಲ್ಲಿ ಭಾರತ ಮಾತಾ ಡಿಗ್ರಿ ಕಾಲೇಜು ರಸ್ತೆಯಲ್ಲಿ ಪಲ್ಸರ್ ಬೈಕ್ ನಲ್ಲಿ ಬಂದ ಆಗಂತುಕ ಮಹಿಳೆಯನ್ನು ಅಡ್ಡಗಟ್ಟಿ ಬೆದರಿಸಿ 10 ಗ್ರಾಂ ಚಿನ್ನದ ಸರ ಪರಾರಿಯಾಗಿದ್ದಾನೆ. ಈ ಬಗ್ಗೆ ಬೈಲುಕೊಪ್ಪ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 1
Sad Sad 0
Wow Wow 0