ರೋಟರಿಯ 14 ಕ್ಲಬ್ ಗಳ ಸದಸ್ಯರ ಸಮ್ಮಿಲನ; ಸಮಾಜದ ಅಗತ್ಯತೆಗೆ ತಕ್ಕಂತೆ ವಿನೂತನ ಯೋಜನೆ ಜಾರಿಗೊಳಿಸಿ ;ನಾಗೇಂದ್ರ ಪ್ರಸಾದ್ ಕರೆ

ರೋಟರಿಯ 14 ಕ್ಲಬ್ ಗಳ ಸದಸ್ಯರ ಸಮ್ಮಿಲನ;  ಸಮಾಜದ ಅಗತ್ಯತೆಗೆ ತಕ್ಕಂತೆ ವಿನೂತನ ಯೋಜನೆ  ಜಾರಿಗೊಳಿಸಿ ;ನಾಗೇಂದ್ರ ಪ್ರಸಾದ್ ಕರೆ

ಮಡಿಕೇರಿ ಫೆ.24 - ಸಮಾಜದ ಅಗತ್ಯತೆಗೆ ತಕ್ಕಂತೆ ವಿನೂತನವಾದ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಕಾಯ೯ಪ್ರವೖತ್ತವಾಗಬೇಕು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಸಮಾಜದಲ್ಲಿಯೂ ಅಗತ್ಯತೆಗಳ ಬದಲಾವಣೆಗೆ ತಕ್ಕಂತೆ ಯೋಜನೆ ಜಾರಿಯಾಗಬೇಕೆಂದು ರೋಟರಿ ಜಿಲ್ಲೆ 3192 ನ ಬೆಂಗಳೂರು ಪೀಣ್ಯ ರೋಟರಿ ಸಂಸ್ಥೆಯ ಪ್ರಮುಖ ನಾಗೇಂದ್ರಪ್ರಸಾದ್ ಕರೆ ನೀಡಿದ್ದಾರೆ.

ನಗರದ ಹೊರವಲಯದಲ್ಲಿನ ಸಂಪಿಗೆ ಇಕೋ ವಿಲೇಜ್ ರೆಸಾಟ್೯ನಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ವತಿಯಿಂದ ರೋಟರಿ ವಲಯ 6 ರ 14 ರೋಟರಿ ಸಂಸ್ಥೆಗಳಿಗೆ ಸೇರಿದ ಸದಸ್ಯರ ಸಮ್ಮಿಲನ ಸಮಾರಂಭ ಉದ್ಗಾಟಿಸಿ ಅವರು ಮಾತನಾಡಿದರು.

ರೋಟರಿ ಸಂಸ್ಥೆಗಳಿಗೆ ಯುವಕ, ಯುವತಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕಷಿ೯ಸಬೇಕು. ಸೇವಾ ಕಾಯ೯ಗಳಿಗೆ ಯುವಪೀಳಿಗೆ ಮುಂದಾಗುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕೆಂದು ಕರೆ ನೀಡಿದ ಅವರು, ಕೋವಿಡ್ ಲಾಕ್ ಡೌನ್ ಸಂದಭ೯ದಲ್ಲಿಯೂ ರೋಟರಿ ಸಂಸ್ಥೆಗಳು ವಿಶ್ವವ್ಯಾಪಿ ಸಕ್ರಿಯವಾದ ಕಾಯ೯ಚಟುವಟಿಕೆ ಮೂಲಕ ಜನರ ನೆರವಿಗೆ ಮುಂದಾಗಿತ್ತು, ಹಲವೊಮ್ಮೆ ಸಕಾ೯ರಗಳಿಂದಲೂ ಸಾಧ್ಯವಾಗದ ಕಾಯ೯ಯೋಜನೆಗಳು ರೋಟರಿ ಮೂಲಕ ಸಾಧ್ಯವಾಗುತ್ತಿದೆ ಎಂದು ಹೆಮ್ಮೆಯಿಂದ ನುಡಿದರು.

1905 ರಲ್ಲಿ ಗೆಳೆತನ ಮತ್ತು ವ್ಯವಹಾರದ ಉದ್ದೇಶದಿಂದ ಚಿಕಾಗೋ ನಗರದಲ್ಲಿ ಪೌಲ್ ಹ್ಯಾರೀಸ್ ಅವರಿಂದ ಸ್ಥಾಪಿಸಲ್ಪಟ್ಟ ರೋಟರಿ ಸಂಸ್ಥೆ ಇಂದು ಅಗಾಧವಾಗಿ ಜಗತ್ತಿನಾದ್ಯಂತ ಬೇರೂರಿರುವುದಕ್ಕೆ ರೋಟರಿ ಸದಸ್ಯರ ಸಾಮಾಜಿಕ ಸೇವಾ ಉದ್ದೇಶವೇ ಮುಖ್ಯ ಕಾರಣ ಎಂದೂ ನಾಗೇಂದ್ರ ಪ್ರಸಾದ್ ವಿಶ್ಲೇಷಿಸಿದರು.

 ಮುಂದಿನ ಸಾಲಿನ ರೋಟರಿ ಗವನ೯ರ್ ಸತೀಶ್ ಬೋಳಾರ್ ಮಾತನಾಡಿ, ರೋಟರಿಗೆ ವಿಶ್ವವ್ಯಾಪಿ ಗೌರವದ ಮನ್ನಣೆಯಿದೆ. ಭಾರತದ ರೋಟರಿ ಸದಸ್ಯರ ವಿನೂತನ ಕಾಯ೯ಯೋಜನೆಗಳು ಜಗತ್ತಿನ ಗಮನ ಸೆಳೆದಿವೆ. ಇತ್ತೀಚಿಗೆ ಬೆಂಗಳೂರು ಮೂಲದ ರೋಟರಿ ಸದಸ್ಯ ರವಿಶಂಕರ್ ಡಾಕೋಜಿ ಅವರು ಅಂತರರಾಷ್ಟ್ರೀಯ ರೋಟರಿ ಸಂಸ್ತೆಗೆ 500 ಕೋಟಿ ರು. ದಾನ ನೀಡಿರುವುದು ಜಗತ್ತಿನ ರೋಟರಿ ಇತಿಹಾಸದಲ್ಲಿಯೇ ಅಪೂವ೯ ದೇಣಿಗೆಯಾಗಿ ದಾಖಲಾಗಿದೆ ಎಂದರು. ಸಾಮಾಜಿಕ ಸೇವೆಗೆ ಭಾರತೀಯ ರೋಟರಿ ಸದಸ್ಯರು ಸದಾ ಸ್ಪಂದಿಸುವುದಕ್ಕೆ ಭಾರತದ ಮಣ್ಣಿನ ಗುಣವೇ ಪ್ರಮುಖ ಕಾರಣವಾಗಿದೆ ಎಂದೂ ಸತೀಶ್ ಬೋಳಾರ್ ಅಬಿಪ್ರಾಯಪಟ್ಟರು.

ರೋಟರಿಯ ಚುನಾಯಿತ ಗವನ೯ರ್ ಯಶಸ್ವಿ ಸೋಮಶೇಖರ್ ಮಾತನಾಡಿ, ಸ್ವಾಥ೯ರಹಿತ ಸಮಾಜಸೇವೆಯ ಧ್ಯೇಯದೊಂದಿಗೆ ನಾನಾ ಕಾಯ೯ಯೋಜನೆ ಜಾರಿಗೊಳಿಸುವ ಮೂಲಕ ರೋಟರಿಯು ಸಮಾಜದಲ್ಲಿ ಅತ್ಯಂತ ಪ್ರಮುಖ ಸೇವಾ ಸಂಸ್ಥೆಯಾಗಿದೆ. ಜನಪರ ಸೇವಾ ಚಳುವಳಿಗೆ ರೋಟರಿ ಪ್ರಸಿದ್ದಿ ಪಡೆದಿದೆ. ರೋಟರಿ ಸದಸ್ಯರೆಲ್ಲರೂ ಒಗ್ಗೂಡಿ ಸಮಾಜ ಸೇವೆಗೆ ಮುಂದಾದಲ್ಲಿ ಸಮಾಜದಲ್ಲಿ ಸಾಕಷ್ಟು ಪರಿವತ೯ನೆ ಸಾಧ್ಯವಿದೆ ಎಂದರು.

ರೋಟರಿ ವಲಯ 6 ರ ಸಹಾಯಕ ಗವನ೯ರ್ ರಾಜುಗೌಡ ಮಾತನಾಡಿ, ರೋಟರಿ ಸೇವಾ ಕಾಯ೯ಗಳು ಇತರರಿಗೂ ಸ್ಪೂತಿ೯ಯ ಸೆಲೆಯಾಗಿದೆ ಎಂದರು. ಸಹಾಯಕ ಗವನ೯ರ್ ಧಿಲ್ಲನ್ ಚಂಗಪ್ಪ ಮಾತನಾಡಿ, 11 ವಷ೯ಗಳ ಬಳಿಕ ವಲಯ 6 ರ 14 ರೋಟರಿ ಸಂಸ್ಥೆಗಳ 350 ಸದಸ್ಯರು ಸಮ್ಮಿಲನಗೊಂಡಿರುವುದು ಶ್ಲಾಘನೀಯ ಎಂದರು.

ರೋಟರಿ ವಲಯ ಸಹಾಯಕ ಗವನ೯ರ್ ಉಲ್ಲಾಸ್ ಕೖಷ್ಣ ಮಾತನಾಡಿ, ಇದೇ ಮಾಚ್೯ 1 ರಂದು ಕುಶಾಲನಗರ ರೋಟರಿ ಸಂಸ್ಥೆಯ 50 ನೇ ವಷ೯ದ ಸಂಭ್ರಮವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

 ರೋಟರಿ ಸಮ್ಮಿಲನ ಆಚರಣಾ ಸಮಿತಿ ಅಧ್ಯಕ್ಷ ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ನ ಸತ್ಯನಾರಾಯಣ್ ಮಾತನಾಡಿ, 14 ರೋಟರಿ ಸಂಸ್ಥೆಗಳ 300 ಕ್ಕೂ ಅಧಿಕ ಸದಸ್ಯರು ಒಂದೆಡೆ ಸೇರಿ ರೋಟರಿಯ ಭವಿಷ್ಯದ ಹಾದಿಯನ್ನು ನಿಧ೯ರಿಸಲು ಚಿಂತಿಸಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದರು.

 ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಸ್ವಾಗತಿಸಿ , ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ಅಧ್ಯಕ್ಷ ಜಿ.ಕೆ. ಜಗನ್ ವಂದಿಸಿದ ಕಾಯ೯ಕ್ರಮವನ್ನು ಸಮ್ಮಿಲನ ಕಾಯ೯ಕ್ರಮ ಸಮಿತಿ ಸಂಚಾಲಕ ಅನಿಲ್ ಹೆಚ್.ಟಿ. ನಿರೂಪಿಸಿದರು.

ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ, ಮಿಡ್ ಟೌನ್ ಕಾಯ೯ದಶಿ೯ ಟಿ.ಕೆ.ಚೇತನ್ ವೇದಿಕೆಯಲ್ಲಿದ್ದರು. ಡಾ. ಚೆರಿಯಮನೆ ಪ್ರಶಾಂತ್ ಅತಿಥಿ ಪರಿಚಯ ಮಾಡಿದರು. ವಿರಾಜಪೇಟೆಯ ಟಿ.ಡಿ. ಮೋಹನ್, ಅನ್ವಿತ್ ಕುಮಾರ್, ಸುಪ್ರಿತಾ ದಿಲೀಪ್, ಅಜಿತ್ ಕುಮಾರ್, ಇಶಾನಿ ರೈ ತಂಡದಿಂದ ಸಂಗೀತ ಸಂಜೆ ಆಯೋಜಿತವಾಗಿತ್ತು.