ಕನ್ನಡ ಚಿತ್ರಗಳು ಹೆಚ್ಚು ನಿರ್ಮಾಣವಾಗಬೇಕು,ಕನ್ನಡಿಗರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಬೇಕು;ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್

Apr 6, 2026 - 19:35
 0  261
ಕನ್ನಡ ಚಿತ್ರಗಳು ಹೆಚ್ಚು ನಿರ್ಮಾಣವಾಗಬೇಕು,ಕನ್ನಡಿಗರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಬೇಕು;ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್

ಸೋಮವಾರಪೇಟೆ:ಕನ್ನಡ ಚಿತ್ರಗಳು ಹೆಚ್ಚು,ಹೆಚ್ಚು ನಿರ್ಮಾಣವಾಗಬೇಕು,ಚಿತ್ರರಂಗ ಬೆಳೆಯಬೇಕು.ಕನ್ನಡಿಗರು ಚಿತ್ರಮಂದಿರಕ್ಕೆ ಬಂದು ಚಿತ್ರನೋಡಬೇಕೆಂದು ಮಾಜಿ ಕ್ರೀಡಾಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.

 ಕೊಡಗಿನ ರೂಪಾಮೋಹನ್ ಸೃಷ್ಟಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಿಸಿ,ನಿರ್ದೇಶಿಸುತ್ತಿರುವ ಜೇನುಬೇಲಿ ಚಿತ್ರದ ಚಿತ್ರೀಕರಣಕ್ಕೆ ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಚಾಲನೆನೀಡಿ ಮಾತನಾಡಿದರು. ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಇಲ್ಲಿ ಸಾಕಷ್ಟು ಚಿತ್ರಗಳು ನಿರ್ಮಾಣ ವಾಗುತಿದೆ,ಆಗಬೇಕುಕೂಡ.ಆದರೆ ಕನ್ನಡಿಗರು ಚಿತ್ರಮಂದಿರಗಳಿಗೆ ತೆರಳಿ ಚಿತ್ರನೋಡಿದರೆ ಚಿತ್ರರಂಗ ಉಳಿಯುತ್ತದೆ,ಬೆಳೆಯುತ್ತದೆ ಎಂದರು.

ಕೊಡಗು ಜಿಲ್ಲೆಯ ಮೂಲದವರಾದ ಶ್ರೀಮತಿ.ರೂಪ ಮೋಹನ್ ಉತ್ತಮ ಕಥೆಯನ್ನು ಆಯ್ಕೆಮಾಡಿಕೊಂಡು ಸಿನಿಮಾ ಮಾಡಲು ಹೊರಟಿರುವುದು ಶ್ಲಾಘನೀಯವೆಂದರು.

 ಚಿತ್ರದ ನಿರ್ಮಾಪಕಿ,ನಿರ್ದೇಶಕಿ ರೂಪಮೋಹನ್ ಮಾತನಾಡಿ ಜೇನು ಕುರುಬರ ಜೀವನಶೈಲಿ ಮತ್ತು ಅವರ ನೋವು ನಲಿವುಗಳ ಕಥೆಯನ್ನು ಕಲಾತ್ಮಕ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ ಈ ಚಿತ್ರವನ್ನು ಬಹುತೇಕ ಕೊಡಗಿನಲ್ಲಿಯೇ ಚಿತ್ರಿಕರಿಸಲಾಗುವುದು ಎಂದು ತಿಳಿಸಿದರು.

ಗಿರಿಜನರ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಪೂರ್ಣ ಪ್ರಮಾಣದ ಎರಡು ಗಂಟೆಯ ಚಿತ್ರವಾಗಿದ್ದು, ಬಹುತೇಕ ಚಿತ್ರೀಕರಣ ಕೊಡಗಿನಲ್ಲೆ ನಡೆಯಲಿದೆ. ಗಿರಿಜನರ ಹಾಡಿಗಳಲ್ಲಿ ಅವಶ್ಯಕವಿರುವಷ್ಟು ಚಿತ್ರೀಕರಣ ಮಾಡಲಾಗುವುದು. ಚಿತ್ರದಲ್ಲಿ ಮೂರು ಹಾಡುಗಳಿರುತ್ತವೆ. ಒಂದು ಹಾಡಿಗೆ ಗಿರಿಜನರೆ ನುಡಿಸುವ ಸಂಗೀತವನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದರು.

ಸುಮಾರು ೭೦ ವರ್ಷಗಳಿಂದಲೂ ಗಿರಿಜನರು ಕಾಡಿನ ಸರಹದ್ದಿನಲ್ಲಿ ಬದುಕುತ್ತಿದ್ದಾರೆ. ಅವರ ಬದುಕು, ಅರೋಗ್ಯ, ಶಿಕ್ಷಣ, ಆಹಾರ ಪದ್ದತಿ, ಅವರ ಸಂಪ್ರಾದಾಯಗಳು, ನೃತ್ಯ, ಅಚರಿಸುವ ಹಬ್ಬ ಹರಿದಿನಗಳು ಇಂತಹ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗುವುದು ಎಂದು ಹೇಳಿದರು.

ಕಥೆ ಮತ್ತು ಚಿತ್ರಕಥೆ ಜೆ.ಎಂ.ಪ್ರಹ್ಲಾದ್, ಸಹಾಯಕ ನಿರ್ದೇಶನ ಶರತ್ ಬಿಳಿನೆಲೆ, ಛಾಯಗ್ರಾಹಣ ಸಂದೀಪ್ ಹೊನ್ನಾಳಿ, ಅದ್ವಿಕ್ ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಚಿತ್ರೀಕರಣ ಮಹೂರ್ತ ಸಂದರ್ಭ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ,ಬೇಳೂರು ಕಾಡಿಬೇಳೆಗಾರರಾದ ಬಿ.ಜಿ.ಗುರುಮಲ್ಲೇಶ,ಕೆ.ಎಂ.ನಿರಂಜನ್,ಬೇಳೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುದರ್ಶನ್ ಪ್ರಮುಖರುಗಳಾದ ಸೋಮೇಶ್, ಮಧು,ಶರತ್ ಹಾಗೂ ಮುಂತಾದವರು ಹಾಜರಿದ್ದರು. 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0