ಪಾಲಿಬೆಟ್ಟ ವರ್ತಕರ ಸಂಘದ ಅಧ್ಯಕ್ಷರಾಗಿ ಮುನೀರ್ ಆಯ್ಕೆ
ಸಿದ್ದಾಪುರ:- ದಿನನಿತ್ಯ ವ್ಯಾಪಾರ ವಹಿವಾಟಿನೊಂದಿಗೆ ಸಮಯದ ಒತ್ತಡದಲ್ಲಿರುವ ವರ್ತಕರು ಒಗ್ಗಟ್ಟಾಗಿ ಸೇರಲು ಸಾಧ್ಯವಾಗುತ್ತಿರಲಿಲ್ಲ. ಗ್ರಾಮದ ಕೆಲವು ವರ್ತಕರು ಒಗ್ಗಟ್ಟಿನ ಮೂಲಕ ಮುನ್ನಡೆಯಲು ವರ್ತಕರನ್ನ ಒಗ್ಗೂಡಿಸಿ ಸಭೆಯೊಂದನ್ನು ನಡೆಸಿ ವರ್ತಕರ ಸಂಘವನ್ನ ಅಸ್ತಿತ್ವಕ್ಕೆ ತರಲು ತೀರ್ಮಾನಿಸಿದರು. ಪಾಲಿಬೆಟ್ಟ ವರ್ತಕರ ಸಂಘದ ನೂತನ ಅಧ್ಯಕ್ಷರಾಗಿ ಎಂ ಯು ಮುನೀರ್ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಿದರು.
ಉಪಾಧ್ಯಕ್ಷರುಗಳಾಗಿ ಟಿ ಜಿ ವಿಜೇಶ್, ಮೈಕಲ್, ಪ್ರಧಾನ ಕಾರ್ಯದರ್ಶಿ ಎಂ ಎಚ್ ಸಮೀರ್, ಕಾರ್ಯದರ್ಶಿಗಳಾಗಿ ಸಿ ಎ ಫೈಝಲ್ ಹಾಗೂ ಅಯ್ಯಪ್ಪ, ಖಜಾಂಜಿಯಾಗಿ ಕೆ ಎಚ್ ಅಬೂಬಕ್ಕರ್, ಸಲಹೆಗಾರರಾಗಿ ಪುತ್ತಂ ಪ್ರದೀಪ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಎ ಎಲ್ ರವಿಕುಮಾರ್ ಅನಿಲ್, ಜಕ್ರಿಯ, ಹರೀಶ್, ರಶೀದ್, ಫೈಝಲ್ ರೆಹಮಾನ್, ಶೈಲಾ, ಮುಬಾರಕ್, ನಳನಿ, ನಸೀಫ್, ಲೋಕೇಶ್, ಮೂರ್ತಿ, ಸೇರಿದಂತೆ ಮತ್ತಿತರರು ಆಯ್ಕೆಯಾದರು. ಸಭೆಯಲ್ಲಿ ನೂತನ ಅಧ್ಯಕ್ಷ ಮುನೀರ್ ಮಾತನಾಡಿ ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಪಾಲಿಬೆಟ್ಟ ಗ್ರಾಮದಲ್ಲಿ ಎಲ್ಲಾ ವರ್ತಕರು ಒಗ್ಗೂಡಿ ನೂತನ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದ್ದು ಎಲ್ಲಾ ವರ್ತಕರು ಸಂಘದೊಂದಿಗೆ ಕೈಜೋಡಿಸುವ ಮೂಲಕ ಸಂಘದ ಸದಸ್ಯರುಗಳ ಕುಟುಂಬದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ, ಆರೋಗ್ಯ, ಸಂಕಷ್ಟದಲ್ಲಿರುವವರಿಗೆ ಆರ್ಥಿಕ ಸಹಾಯ ಸೇರಿದಂತೆ ಹಲವಾರು ಕಾರ್ಯ ಯೋಜನೆಗಳನ್ನು ರೂಪಿಸಲಾಗಿದ್ದು ಎಲ್ಲಾ ವರ್ತಕರು ಸಂಘದೊಂದಿಗೆ ಕೈಜೋಡಿಸುವುದರ ಮೂಲಕ ಸಹಕಾರ ನೀಡಬೇಕೆಂದರು. ಈ ಸಂದರ್ಭ ಹಿರಿಯ ವರ್ತಕರು ಸಭೆಯಲ್ಲಿ ಹಾಜರಿದ್ದರು.