ಕೊಳಕೇರಿ ಜುಮಾ ಮಸೀದಿಯಲ್ಲಿ ಮುಸಲ್ಮಾನ ಬಾಂಧವರಿಂದ ಸಂಭ್ರಮದ ಪವಿತ್ರ ರಂಝಾನ್ ಹಬ್ಬಾಚರಣೆ

ಕೊಳಕೇರಿ ಜುಮಾ ಮಸೀದಿಯಲ್ಲಿ ಮುಸಲ್ಮಾನ ಬಾಂಧವರಿಂದ ಸಂಭ್ರಮದ ಪವಿತ್ರ ರಂಝಾನ್ ಹಬ್ಬಾಚರಣೆ

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು : ನಾಪೋಕ್ಲು ಬಳಿಯ ಕೊಳಕೇರಿ ಜುಮಾ ಮಸೀದಿಯಲ್ಲಿ ಮುಸಲ್ಮಾನ ಭಾಂದವರು ಈದುಲ್ ಫಿತರ್ ಹಬ್ಬವನ್ನು ಸಂಭ್ರಮ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಕೊಳಕೇರಿ ಜುಮಾ ಮಸೀದಿಯ ಖತೀಬರಾದ ಅಶ್ರಫ್ ಅಹ್ಸನಿ ಕಾಮಿಲ್ ಸೆಖಾಫಿ ಅವರ ನೇತೃತ್ವದಲ್ಲಿ ಸಾಮೂಹಿಕ ಈದ್ ನಮಾಜ್ ನೆರವೇರಿಸಲಾಯಿತು.

ಪವಿತ್ರ ಬಕ್ರೀದ್ ಹಬ್ಬವು ಪರಸ್ಪರ ಶಾಂತಿ,ಸೌಹಾರ್ದತೆ, ಸಹಬಾಳ್ವೆಯನ್ನು ಸಾರುವ ಹಬ್ಬವಾಗಿದೆ. ಪ್ರವಾದಿ ಅವರ ಸಂದೇಶದಂತೆ ನಾಡಿನಲ್ಲಿ ಐಕ್ಯತೆಯಿಂದ ಎಲ್ಲರೂ ಜೀವನ ನಡೆಸಬೇಕು.ಎಲ್ಲಾ ಧರ್ಮದವರೊಂದಿಗೆ ಸೌಹಾರ್ದತೆಯನ್ನು ಬೆಳೆಸಬೇಕೆಂದು ಮಸೀದಿಯ ಖತೀಬರಾದ ಅಶ್ರಫ್ ಅಹ್ಸನಿ ಕಾಮಿಲ್ ಸಾಖಾಫಿ ಈದ್ ಸಂದೇಶ ಸಾರಿದರು.

 ಬಳಿಕ ನಾಡಿನಿಂದ ಮೃತಪಟ್ಟವರ ಖಬರ್ ಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಿಹಿ ಹಂಚಿ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. ಈ ಸಂದರ್ಭ ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಎ.ಎ.ಅಶ್ರಫ್ ಕಾರ್ಯದರ್ಶಿ ಎಂ. ಎಚ್.ರಫೀಕ್, ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು, ಜಮಾಅತ್ ನ ಸರ್ವಸದಸ್ಯರು ಪಾಲ್ಗೊಂಡಿದ್ದರು.