ಸ್ನೇಹತೀರಂ ಬಳಗದ ನೂತನ ಅಧ್ಯಕ್ಷರಾಗಿ ಮುಸ್ತಫಾ ಕೆಎಂ ಆಯ್ಕೆ

Jan 13, 2026 - 19:17
 0  394
ಸ್ನೇಹತೀರಂ ಬಳಗದ ನೂತನ ಅಧ್ಯಕ್ಷರಾಗಿ ಮುಸ್ತಫಾ ಕೆಎಂ ಆಯ್ಕೆ
ಫೋಟೋ: ಅಧ್ಯಕ್ಷ & ಪ್ರ.ಕಾರ್ಯದರ್ಶಿ

ಸಿದ್ದಾಪುರ:ಕಳೆದ ಹನ್ನೊಂದು ವರ್ಷಗಳಿಂದ ವಿರಾಜಪೇಟೆ ತಾಲೂಕಿನ ಹುಂಡಿ ಗ್ರಾಮವನ್ನು ಕೇಂದ್ರೀಕರಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸ್ನೇಹತೀರಂ ಬಳಗದ 2026ನೇ ಸಾಲಿನ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು.

ಬಳಗದ ಸದಸ್ಯರು ವಿದೇಶಗಳಲ್ಲಿ, ಹೊರ ರಾಜ್ಯಗಳಲ್ಲಿ ಹಾಗೂ ಹೊರ ಜಿಲ್ಲೆಗಳಲ್ಲಿ ಉದ್ಯೋಗದಲ್ಲಿರುವ ಕಾರಣ ಆನ್ಲೈನ್ ಮುಖಾಂತರ ನಡೆದ ವಾರ್ಷಿಕ ಸಭೆಯಲ್ಲಿ ಕಾರ್ಯದರ್ಶಿಗಳ ಅನುಪ ಸ್ಥಿತಿಯಲ್ಲಿ ಉಪಾಧ್ಯಕ್ಷರಾದ ಉನೈಸ್ ಪಿ.ಐ 2025ನೇ ಸಾಲಿನ ಲೆಕ್ಕಪತ್ರವನ್ನು ಮಂಡಿಸಿದರು. 2026ನೇ ಸಾಲಿನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಇಸ್ಮಾಯಿಲ್ ಬಿ.ಕೆ ಹಾಗೂ ಜಾಫರ್ ಸಿ ಕೆ ರವರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮುಸ್ತಫಾ ಕೆ ಎಂ, ಉಪಾಧ್ಯಕ್ಷರಾಗಿ ಜುಬೈರ್ ಟಿ ಎಂ, ಪ್ರಧಾನ ಕಾರ್ಯದರ್ಶಿಯಾಗಿ ಸಲಾಹುದ್ಧೀನ್ ಬಿ.ವೈ ಸಹ ಕಾರ್ಯದರ್ಶಿಯಾಗಿ ಸಲೀಂ ಪಿ.ಎ, ಕೋಶಾಧಿಕಾರಿಗಳಾಗಿ ನೌಶಾದ್ ಕೆ.ಎಂ ಹಾಗೂ ರಜಾಕ್ ಕೆ ಎಸ್ ರವರನ್ನು ಆಯ್ಕೆ ಮಾಡಲಾಯಿತು. ಸದಸ್ಯರ ಮಾಸಿಕ ಶುಲ್ಕ ಸಂಗ್ರಹಕ್ಕಾಗಿ ಹಾಗೂ ಅಡ್ಮಿನ್ ಗಳಾಗಿ ಉನೈಸ್ ಪಿ.ಐ ಹಾಗೂ ಅಯ್ಯೂಬ್ ಎಂ ಎಸ್ ರವರನ್ನು ನೇಮಿಸಲಾಯಿತು.

 ಆಡಳಿತ ಮಂಡಳಿ ಸದಸ್ಯರಾಗಿ ಉನೈಸ್ ಬಿ ಯು, ನೌಶಾದ್ ಎನ್ ಎಂ, ಸಲೀಂ ಎಂ ಸಿ, ಸೌಕು ಜಿನ್ನಾ, ಅನ್ಸಾರ್ ಪಿ ಎಂ, ಶರೀಫ್ ಎನ್ ಎಂ, ತಾಜುದ್ಧೀನ್ ಪಿ ಎಂ, ಹಕೀಂ ಪಿ ಎಂ, ಅಬೂ ತಾಹಿರ್ ಕೆ ಯು, ನಿಸಾರ್ ಪಿ ಎಸ್, ನೌಶಾದ್ ಕೆ ಎಂ, ಶರಫುದ್ಧೀನ್ ಕೆ ಎಂ, ಮನಾಫ್ ಕೆ ಎಚ್ ರವರನ್ನು ಆಯ್ಕೆ ಮಾಡಲಾಯಿತು.

What's Your Reaction?

Like Like 3
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0