ದೆಹಲಿಯ ತಲ್ ಸೈನಿಕ್ ಶಿಬಿರಕ್ಕೆ ಕೊಡಗು ವಿದ್ಯಾಲಯದ ಎನ್.ಸಿ.ಸಿ ಕೆಡೆಟ್ ಆಯ್ಕೆ

Aug 31, 2026 - 14:43
 0  114
ದೆಹಲಿಯ ತಲ್ ಸೈನಿಕ್ ಶಿಬಿರಕ್ಕೆ ಕೊಡಗು ವಿದ್ಯಾಲಯದ ಎನ್.ಸಿ.ಸಿ ಕೆಡೆಟ್ ಆಯ್ಕೆ

ಮಡಿಕೇರಿ ಆ 31- ಕೊಡಗು ವಿದ್ಯಾಲಯದ ಎನ್.ಸಿ.ಸಿ ಕೆಡೆಟ್ ಗೋಲ್ಡನ್ ಸಾರ್ಜೆಂಟ್ ಜೇಷ್ಟ ಸುಬ್ಬಯ್ಯ ಎಂ.ಹೆಚ್ ಅವರು ಪ್ರತಿಷ್ಠಿತ ಅಖಿಲ ಭಾರತ ತಲ್ ಸೈನಿಕ್ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಈ ಶಿಬಿರವು 2026ರ ಆಗಸ್ಟ್ 31 ರಿಂದ ಸೆಪ್ಟೆಂಬರ್ 11 ರವರೆಗೆ ನವದೆಹಲಿಯಲ್ಲಿ ನಡೆಯಲಿದೆ.

 ಫೈರಿಂಗ್ (ಗ್ರೂಪಿಂಗ್) ವಿಭಾಗದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದಿಂದ 3 ಕೆಡೆಟ್‌ಗಳ ಮಾತ್ರ ಆಯ್ಕೆಯಾಗಿದ್ದು, ಅದರಲ್ಲಿ ಜೇಷ್ಟ ಸುಬ್ಬಯ್ಯ ಒಬ್ಬರಾಗಿದ್ದಾರೆ. ಕರ್ನಾಟಕದ ವಿವಿಧೆಡೆ ನಡೆದ 7 ಆಯ್ಕೆ ಶಿಬಿರಗಳಲ್ಲಿ ಜೇಷ್ಟ ಸುಬ್ಬಯ್ಯ ಭಾಗವಹಿಸಿ, ಗ್ರೂಪಿಂಗ್ ಶೂಟಿಂಗ್ ಸ್ಪರ್ಧೆಯಲ್ಲಿ 1.2 ಸೆಂ.ಮೀ ಗ್ರೂಪಿಂಗ್ ಸಾಧನೆ ಮಾಡುವ ಮೂಲಕ ಈ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾನೆ ಎಂದು ಶಾಲಾ ಪ್ರಾಂಶುಪಾಲರಾದ ಸುಮಿತ್ರಾ ತಿಳಿಸಿದ್ದಾರೆ

. ಜೇಷ್ಟ ಸುಬ್ಬಯ್ಯ ಮರಗೋಡುವಿನ ಕೃಷಿಕ ಮಂಡಿರ ಎಂ.ವಿ. ಹರೀಶ್ ಮತ್ತು ವಿಮಾ ದಂಪತಿಯ ಪುತ್ರನಾಗಿದ್ದು 19ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಯ ಕೆಡೆಟ್ ಆಗಿದ್ದಾನೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0