ನಲ್ವತೋಕ್ಲು: ಮೂರು ವಾರದಿಂದ ಗ್ರಾಮಕ್ಕೆ ಬಾರದ HP ಗ್ಯಾಸ್ ಸರಬರಾಜು ವಾಹನ : ಮನೆಯ ಮುಂದೆ ಸಿಲಿಂಡರ್ ಇಟ್ಟು ಕಾಯುವ ಪರಿಸ್ಥಿತಿ

Dec 19, 2025 - 19:22
Dec 19, 2025 - 19:25
 0  375
ನಲ್ವತೋಕ್ಲು: ಮೂರು ವಾರದಿಂದ ಗ್ರಾಮಕ್ಕೆ ಬಾರದ HP ಗ್ಯಾಸ್ ಸರಬರಾಜು ವಾಹನ :   ಮನೆಯ ಮುಂದೆ ಸಿಲಿಂಡರ್ ಇಟ್ಟು ಕಾಯುವ ಪರಿಸ್ಥಿತಿ

ವಿರಾಜಪೇಟೆ:ಸಮೀಪದ ಬಿಳುಗುಂದ ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ನಲ್ವತೋಕ್ಲು ಗ್ರಾಮಸ್ಥರಿಗೆ HP ಗ್ಯಾಸ್ ಸಿಲಿಂಡರ್ ಸಿಗದೆ ಕಳೆದ ಮೂರು ವಾರದಿಂದ ಪರದಾಡುವ ಪರಿಸ್ಥಿತಿ ಎದುರಾಗಿದೆ.

ವಿರಾಜಪೇಟೆಯಿಂದ ನಲ್ವತೋಕ್ಲು ಗ್ರಾಮಕ್ಕೆ ಸರಬರಾಜು ಆಗುತ್ತಿದ್ದ HP ಗ್ಯಾಸ್ ಇದೀಗ ವಾರದಿಂದ ಗ್ರಾಮಕ್ಕೆ ಸರಬರಾಜು ಆಗುತ್ತಿಲ್ಲ ಎಂದು ವಿರಾಜಪೇಟೆ ತಾಲ್ಲೂಕು‌ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಜೀದ್ ಚೋಕಂಡಳ್ಳಿ ಆರೋಪಿಸಿದ್ದಾರೆ.

ಗ್ಯಾಸ್ ಏಜೆನ್ಸಿಗೆ ಕರೆ ಮಾಡಿದರೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ.

ಇವತ್ತು, ನಾಳೆ ಬರುತ್ತೆ ಎಂದು ಹೇಳಿ ಕೆಲಸಕ್ಕೆ ರಜೆ ಮಾಡಿ, ರಸ್ತೆ ಬದಿಯಲ್ಲಿ ಸಿಲಿಂಡರ್ ಇಟ್ಟು ಕಾಯೋ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರತಿ ನಿತ್ಯ ಇಲ್ಲಿಯ ನಿವಾಸಿಗಳು ಗ್ಯಾಸ್ ಸಿಲಿಂಡರ್ ಗೆ ಕಾದು ಕುಳಿತದರೂ ಕೂಡ ಗ್ಯಾಸ್ ಸರಬರಾಜು ಆಗುತ್ತಿಲ್ಲ.ಅದಲ್ಲದೇ ಗ್ಯಾಸ್ ಬುಕ್ಕಿಂಗ್ ‌ಮಾಡಿದರೂ ಕೂಡ OTP ಬರುತ್ತಿಲ್ಲ.

ಶನಿವಾರ ದಿನ ನಲ್ವತೋಕ್ಲು ಗ್ರಾಮಕ್ಕೆ ಗ್ಯಾಸ್ ಸರಬರಾಜು ಮಾಡದಿದ್ದರೆ,ಗ್ಯಾಸ್ ಏಜೆನ್ಸಿ ಮುಂಭಾಗ ಗ್ರಾಮಸ್ಥರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದೆಂದು ಮಜೀದ್ ಚೋಕಂಡಳ್ಳಿ ಎಚ್ಚರಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0