Kodagu

ನಾಪೋಕ್ಲು: ಎಸ್ ವೈ ಎಸ್ ಇಸಾಬಾ ತಂಡದಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ FRESH INDIA ಸ್ವಚ್ಚತಾ ಕಾರ್ಯಕ್ರಮ

admincoorgdaily

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :79ನೇ‌ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಾಪೋಕ್ಲು ಸರ್ಕಲ್ ಹಾಗೂ ಯುನಿಟ್ ನ ಎಸ್ ವೈ ಎಸ್, ಇಸಾಬ ತಂಡದ ಕಾರ್ಯಕರ್ತರಿಂದ ನಾಪೋಕ್ಲು ವಿನಲ್ಲಿ ಸ್ವಚ್ಚತಾ ಶ್ರಮದಾನ ನಡೆಸಲಾಯಿತು. ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದ ಕಾರ್ಯಕರ್ತರು ಸಮುದಾಯ ಆರೋಗ್ಯ ಕೇಂದ್ರದ ಆವರಣದ ಸುತ್ತಲೂ ಬೆಳೆದುಕೊಂಡಿದ್ದ ಕಾಡುಗಳನ್ನು ಕಡಿದು, ನಾಮಫಲಕವನ್ನು ಸ್ವಚ್ಛಗೊಳಿಸಿದರು. 

ಬಳಿಕ ನಾಪೋಕ್ಲು ಪೋಲಿಸ್ ಠಾಣೆಯ ಆವರಣ ಹಾಗೂ ನಾಮಫಲಕವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ಎಸ್ ವೈ ಎಸ್ ಇಸಾಬ ಸಂಘಟನೆ ಆಯೋಜಿಸಿರುವ ಸ್ವಚ್ಛತಾ ಕಾರ್ಯಕ್ರಮ ಸಮಾಜಮುಖಿ ಕಾರ್ಯಕ್ರಮವಾಗಿದೆ. ಸಮಾಜದಿಂದ ನಮಗೆ ಏನು ಸಿಗುತ್ತವೆ ಅನ್ನೋದಕ್ಕಿಂತ ನಾವು ಸಮಾಜಕ್ಕೆ ಏನು ಕೊಡುತ್ತೇವೆ ಅನ್ನೋದು ಬಹಳ ಮುಖ್ಯವಾಗಿದೆ. ಅದೇರೀತಿ ಇಲ್ಲಿ ಇಸಾಬಾ ತಂಡದಿಂದ ಆ ಯೋಜನೆಗೊಂಡ ಸ್ವಚ್ಛತಾ ಕಾರ್ಯಕ್ರಮ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದೆ. ಇವರ ಈ ಕಾರ್ಯ ಇದೇ ರೀತಿ ಮುಂದುವರೆಯಲಿ ಎಂದು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ವ್ಯವಸ್ಥಾಪಕ ಮಧುಸೂದನ್ ಹಾಗೂ ದಂತ ವೈದ್ಯಾಧಿಕಾರಿ ನೂರ್ ಫಾತಿಮ ಸಂಘಟನೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಶುಭ ಕೋರಿದರು.

ಸ್ವಚ್ಛತಾ ಕಾರ್ಯದಲ್ಲಿ ಎಸ್ ವೈ ಎಸ್ ನಾಪೋಕ್ಲು ಸರ್ಕಲ್ ಅಧ್ಯಕ್ಷರಾದ ನಝೀರ್ ಸಖಾಫಿ, ಕಾರ್ಯದರ್ಶಿ ಟಿ. ಎಂ. ಇಸ್ಮಾಯಿಲ್, ಇಸಾಬ ಕಾರ್ಯದರ್ಶಿ ಅಸ್ಕರ್ ಸಖಾಫಿ, ಜಿಲ್ಲಾ ಇಸಾಬ ಕಾರ್ಯದರ್ಶಿ ಬಷೀರ್ ಕೊಟ್ಟಮುಡಿ, ಜಿಲ್ಲಾ ಸಮಿತಿ ಸದಸ್ಯ ಮಜೀದ್ ಅಜಾದ್ ನಗರ, ನಾಪೋಕ್ಲು ಶಾಖೆಯ ಎಸ್ ವೈ ಎಸ್ ಕಾರ್ಯದರ್ಶಿ ಸಾದಿಕ್ ನಿಜಾಮಿ, ಸದಸ್ಯರಾದ ಅಬ್ದುಲ್ ರಹ್ಮಾನ್ ಹಾಜಿ, ಯೂನಸ್,ಅದ್ದು ಹಾಜಿ, ರಶೀದ್, ಮಹಮೂದ್,ಅಬ್ದುಲ್ ರಹ್ಮಾನ್, ಸಿರಾಜ್ ಸೇರಿದಂತೆ ಸಂಘಟನೆಯ ಮತ್ತಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.