ನಾಪೋಕ್ಲು :ರಸ್ತೆ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ತೋಟದೊಳಗೆ ನುಗ್ಗಿದ ಕಾರು

Nov 26, 2025 - 22:43
 0  988
ನಾಪೋಕ್ಲು :ರಸ್ತೆ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ತೋಟದೊಳಗೆ ನುಗ್ಗಿದ ಕಾರು

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು : ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬದಿಯ ತೋಟದೊಳಗೆ ನುಗ್ಗಿದ ಘಟನೆ ನಾಪೋಕ್ಲು ಮಡಿಕೇರಿ ಮುಖ್ಯ ರಸ್ತೆಯ ಕೊಟ್ಟಮುಡಿ ಜಂಕ್ಷನ್ ಬಳಿ ನಡೆದಿದೆ.

ಬೆಟ್ಟಗೇರಿ ಕೊಟ್ಟಮುಡಿ ಮಾರ್ಗವಾಗಿ ಎಮ್ಮೆಮಡುವಿಗೆ ತೆರಳುತ್ತಿದ್ದ ಕೇರಳ ನೋಂದಣಿಯ ಮಾರುತಿ ಆಲ್ಟೊ ಕಾರು ಕೊಟ್ಟಮುಡಿ ಜಂಕ್ಷನ್ ಬಳಿ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಜೆ ವಿ ಎಸ್ಟೇಟ್ ನ ತೋಟದೊಳಗೆ ನುಗ್ಗಿದೆ. ಅಪಘಾತದಿಂದ ಕಾರಿನ ಒಂದು ಬದಿಗೆ ಹಾನಿಯಾಗಿದ್ದು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹದಗೆಟ್ಟು ಗುಂಡಿಗಳೇ ತುಂಬಿಕೊಂಡಿರುವ ಈ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸಲು ಬಹಣೆ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.ರಸ್ತೆ ಗುಂಡಿಗಳಿಂದ ಹಲವು ವಾಹನಗಳು ಅಪಘಾತವಾಗುತ್ತಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆಯವರು ರಸ್ತೆ ದುರಸ್ತಿ ಪಡಿಸಬೇಕೆಂದು ಸಾರ್ವಜನಿಕರು ಹಾಗೂ ವಾಹನ ಸವಾರರು ಒತ್ತಾಯಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 2
Sad Sad 1
Wow Wow 0