ನಾಪೋಕ್ಲು;ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ-ಮೂವರು ಆರೋಪಿಗಳ ಬಂಧನ

May 7, 2026 - 18:32
May 7, 2026 - 21:51
 0  861
ನಾಪೋಕ್ಲು;ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ-ಮೂವರು ಆರೋಪಿಗಳ ಬಂಧನ
ಬಂಧಿತ ಆರೋಪಿಗಳು

ನಾಪೋಕ್ಲು: ಪತ್ರಕರ್ತ ಮತ್ತು ಆಟೋ ಚಾಲಕ ಝಕರಿಯ ಅವರ ಮೇಲೆ ಸೋಮವಾರ ಸಂಜೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬೇತುಗ್ರಾಮದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳು ಪ್ರಕರಣಕ್ಕೆ ಸಂಬಧಿಸಿದಂತೆ ಕೆ.ಎ ಇಸ್ಮಾಯಿಲ್ ಅವರ ಪುತ್ರ ಸಿದ್ದೀಕ್(20), ಇರ್ಫಾನ್ ಪಾಶ ಎಂಬುವರ ಪುತ್ರ ರುಮಾನ್(21) ಮಹಮ್ಮದ್ ಪಿ.ಎಂ. ಎಂಬುವರ ಪುತ್ರ ನಾಫಿ(22) ಎಂಬುವರನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಬಳಸಿದ್ದ ಒಂದು ಕಾರು ವಶಕ್ಕೆ ಪಡೆದಿದ್ದಾರೆ. ಮಹಮ್ಮದ್ ಆಲಿ ತಲೆಮರೆಸಿಕೊಂಡಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0