Kodagu

ನಾಪೋಕ್ಲು :ಇಂದಿರಾನಗರದ ವಿವೇಕಾನಂದ ಸಂಘದ 20ನೇ ವರ್ಷದ ಗಣೇಶೋತ್ಸವ ಆಚರಣೆಯ ಆಹ್ವಾನ ಪತ್ರಿಕೆ ಬಿಡುಗಡೆ

admincoorgdaily

(ವರದಿ:ಝಕರಿಯ ನಾಪೋಕ್ಲು)

 ನಾಪೋಕ್ಲು :ನಾಪೋಕ್ಲುವಿನ ಇಂದಿರಾನಗರದ ವಿವೇಕಾನಂದ ಸಂಘದ ಗಣೇಶೋತ್ಸವ ಸಮಿತಿಯು ಆಚರಿಸಲು ಉದ್ದೇಶಿಸಿರುವ 20ನೇ ವರ್ಷದ ಅದ್ದೂರಿ ಗಣೇಶೋತ್ಸವ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.ಇಂದಿರಾನಗರದ ಸಮುದಾಯ ಭವನದಲ್ಲಿ ಆಯೋಜಿಸಲಾದ ಸರಳ ಕಾರ್ಯಕ್ರಮದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹಾಗೂ ವಿರಾಜಪೇಟೆ ಕೆಪಿಟಿಸಿಎಲ್‌ ಸಹಾಯಕ ಅಭಿಯಂತರರಾದ ಕೆ.ಎಂ. ಪ್ರಸಾದ್ ರವರು ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

 ಈ ಸಂದರ್ಭ ವಿವೇಕಾನಂದ ಸಂಘದ ಅಧ್ಯಕ್ಷ ಹರಿದಾಸ್,ಉಪಾಧ್ಯಕ್ಷ ಯು.ಕೆ. ಶಶಿ,ಕಾರ್ಯದರ್ಶಿ ಸುನಿಲ್,ಖಜಾಂಚಿ ವಿನಿಲ್, ಮಾಜಿ ಅಧ್ಯಕ್ಷ ಸುದೀಶ್,ಜಲೇಂದ್ರ,ಪ್ರಕಾಶ್,ಶಿವ, ವಿನಾಯಕ,ಗಣೇಶ, ಮಣಿಕಂಠ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಜಲೇಂದ್ರ ಅವರು ಸ್ವಾಗತಿಸಿ, ಸರ್ವರನ್ನು ವಂದಿಸಿದರು.