ಮಡಿಕೇರಿಯಲ್ಲಿ ಜನವರಿ 9 ಮತ್ತು 10 ರಂದು 'ನೀನಾಸಂ ತಿರುಗಾಟ' ನಾಟಕ ಪ್ರದರ್ಶನ

Jan 5, 2026 - 14:16
 0  252
ಮಡಿಕೇರಿಯಲ್ಲಿ ಜನವರಿ 9 ಮತ್ತು 10 ರಂದು 'ನೀನಾಸಂ ತಿರುಗಾಟ' ನಾಟಕ ಪ್ರದರ್ಶನ

ಮಡಿಕೇರಿ ಜ. 5 - ಮಡಿಕೇರಿಯಲ್ಲಿ 'ನೀನಾಸಂ ತಿರುಗಾಟ' ನಾಟಕ ಪ್ರದರ್ಶನವನ್ನು ಜನವರಿ 9 ಮತ್ತು 10 ರಂದು ನಗರದ ಓಂಕಾರೇಶ್ವರ ದೇವಾಲಯ ರಸ್ತೆಯಲ್ಲಿನ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದಲ್ಲಿ ಆಯೋಜಿಸಲಾಗಿದೆ.

ಜನವರಿ 9 ರಂದು ಶುಕ್ರವಾರ ಸಂಜೆ 6.30 ಕ್ಕೆ ಬಾನು ಮುಷ್ತಾಕ್ ಅವರ ಕಥೆಯನ್ನು ಆಧರಿಸಿದ ರಂಗಪ್ರಸ್ತುತಿ 'ಹೃದಯದ ತೀರ್ಪು' ಪ್ರದರ್ಶನ ಇದ್ದು ರಂಗರೂಪಕ್ಕೆ ಡಾ. ಎಂ ಗಣೇಶ್ ನಿರ್ದೇಶನ ಇದೆ. ಜ. 10 ರಂದು ಶನಿವಾರ ಸಂಜೆ 6.30 ಗಂಟೆಗೆ ಜಿ. ಶಂಕರ ಪಿಳ್ಳೆ ರಚನೆಯ . ದಾಮೋದರ ಶೆಟ್ಟಿ ಕನ್ನಡಕ್ಕೆ ಅನುವಾದಿಸಿರುವ ಶಂಕರ ವೆಂಕಟೇಶ್ವರನ್ ನಿರ್ದೇಶನದ ಅವತರಣಮ್ ಭ್ರಾಂತಾಲಯಮ್ ನಾಟಕ ಪ್ರದರ್ಶನ ಇದೆ.

ಎರಡೂ ನಾಟಕಗಳಿಗೂ ಉಚಿತ ಪ್ರವೇಶ ಇರುತ್ತದೆ ಎಂದು ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 1