ನೆಲ್ಲಿಹುದಿಕೇರಿ;ಶ್ರೀ ಸತ್ಯನಾರಾಯಣ ದೇವಸ್ಥಾನದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಭಕ್ತ ಸಮೂಹ

Mar 29, 2026 - 20:12
 0  209
ನೆಲ್ಲಿಹುದಿಕೇರಿ;ಶ್ರೀ ಸತ್ಯನಾರಾಯಣ ದೇವಸ್ಥಾನದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಭಕ್ತ ಸಮೂಹ

ಸಿದ್ದಾಪುರ; ಇತಿಹಾಸ ಪ್ರಸಿದ್ಧಿಯಾಗಿರುವ ಕೊಡಗಿನ ಏಕೈಕ ಪುರಾತನ ಕಾಲದ ನೆಲ್ಲಿಹುದಿಕೇರಿ ಶ್ರೀ ಸತ್ಯನಾರಾಯಣ ದೇವರ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಅದ್ಧೂರಯಾಗಿ ನೆರವೇರಿತು.

 ತಂತ್ರಿಗಳಾದ ಬಿ. ಎಸ್. ವೆಂಕಟಕೃಷ್ಣ ಅವರ ನೇತೃತ್ವದಲ್ಲಿ. ಮೂರು ದಿನಗಳ ಕಾಲ ನಡೆದ ಪೂಜಾ ಕಾರ್ಯದಲ್ಲಿ ಗಣಹೋಮ ಉತ್ಸವದ ಮೂಲಕ ಪ್ರಾರಂಭಗೊಂಡು ತಕ್ಕರ ಮನೆಯಿಂದ ಭಂಡರಾ ಇಳಿಸುವುದು , ಶುದ್ಧ ಕಳಸ, ಶ್ರೀ ದೇವರ ಬಲಿ ಬರುವುದು, ಸಾಮೂಹಿಕ ರಂಗ ಪೂಜೆ, ಶ್ರೀ ದೇವರ ತೀರ್ಥ ಪ್ರಸಾದ, ಇರುಬೆಳಕು, ಸಾಮೂಹಿಕ ಆಶ್ಲೇಷಬಲಿ, ಮಹಾಪೂಜೆ, ಶ್ರೀ ಮೊದಮ್ಮ ದೇವಸ್ಥಾನದಲ್ಲಿ ಅಕ್ಕಿಹೇರುವುದು ಹಾಗೂ ಮಹಾ ಪೂಜೆ ನಂತರ ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ ನೆರಪು ಬಲಿ,

ಸಾಮೂಹಿಕ ಸತ್ಯನಾರಾಯಣ ಪೂಜೆ, ದೇವಸ್ಥಾನದಿಂದ ಶ್ರೀ ಪೋದಮ್ಮ ದೇವಸ್ಥಾನಕ್ಕೆ ತೆರಳಿ ವಸಂತ ಪೂಜೆ, ಬಟ್ಟಲು ಕಾಣಿಕೆ ನಂತರ ಶ್ರೀ ದೇವರು ಕಾವೇರಿ ನದಿಯ ದಡದಲ್ಲಿ ಅವಭೃತ ಸ್ನಾನಕ್ಕೆ ಹೊರಡುವುದು, ದೇವಸ್ಥಾನದಲ್ಲಿ ಶ್ರೀ ದೇವರ ಆರಾಟ್ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಶ್ರೀ ದೇವರ ತೀರ್ಥ ಪ್ರಸಾದ, ದೇವಸ್ಥಾನದಿಂದ ಭಂಡಾರ ತಕ್ಕರ ಮನೆಗೆ ತಲುಪಿಸುವುದು,ಶುದ್ಧ ಕಳಸ, ಮಹಾಪೂಜೆ, ಶ್ರೀ ದೇವರ ತೀರ್ಥ ಪ್ರಸಾದ, ಮಂತ್ರಾಕ್ಷತೆ ನಂತರ ಮೂರು ದಿನಗಳ ಕಾಲ ಅನ್ನಸಂತರ್ಪಣೆ ಕಾರ್ಯ ನಡೆಯಿತು ಕೊಡಗು ಜಿಲ್ಲೆ ಸೇರಿದಂತೆ ಇತರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

 ಈ ಸಂದರ್ಭ ತಕ್ಕರು. ಟಿ ಪಿ ನಂಜಪ್ಪ ಮುಖ್ಯಸ್ಥರು ಟಿ ಬಿ ಗಣೇಶ್, ದೇವಸ್ಥಾನ ಸಮಿತಿ ಆಡಳಿತ ಮಂಡಳಿ ಅಧ್ಯಕ್ಷ ಟಿ ಜಿ ಚಂದ್ರಶೇಖರ್, ಉಪಾಧ್ಯಕ್ಷ ವಿಜು ಕುಮಾರ್,ಕಾರ್ಯದರ್ಶಿ ಟಿ ಜಿ ವಿನೋದ್, ಜಂಟಿ ಕಾರ್ಯದರ್ಶಿ ಟಿ. ಇ. ಸತ್ಯಜಿತ್, ಖಜಾಂಜಿ ಕೆ.ಜೆ. ಸುಪ್ರೀಂ, ನಿರ್ದೇಶಕರಾದ ಮಾನಸ, ನಂದೀಶ ಸೇರದಂತೆ ಸಮಿತಿಯ ಪ್ರಮುಖರು ಗ್ರಾಮಸ್ಥರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0