ಕಲ್ಲುಬಾಣೆ ರಹ್ಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ ಪಿ.ಸಂಶುದ್ದೀನ್ ಆಯ್ಕೆ
ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಕಲ್ಲುಬಾಣೆಯಲ್ಲಿರುವ ರಹ್ಮ ಚಾರಿಟೇಬಲ್ ಟ್ರಸ್ಟ್ ಇದರ ನೂತನ ಅಧ್ಯಕ್ಷರಾಗಿ ಸಂಶುದ್ದೀನ್ ಪಿ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೆ.ಪಿ ಫಾರೂಕ್, ಕಾರ್ಯದರ್ಶಿಗಳಾಗಿ ಎಂ.ಎ, ನೌಫಲ್ ಜಂಟಿ ಕಾರ್ಯದರ್ಶಿಯಾಗಿ ಕೆ.ಕೆ ರಹೀಮ್, ಖಜಾಂಚಿ ಆಲಿ ಪಿ. ಮತ್ತು ರಫೀಕ್ ಕೆ.ಪಿ., ಫನ್ಸೀರ್ ಇ.ಕೆ., ಫೈಸಲ್ ಪಿ.ಬಿ, ಅಶ್ರಫ್ ಕೆ.ಐ. ನಿರ್ದೇಶಕರುಗಳಾಗಿ ಇವರುಗಳು ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಪಿ ಶಾಪಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.