Kodagu

ಕ್ರಾನಿಯೋಪ್ಲ್ಯಾಸ್ಟಿ ಸರ್ಜರಿಗೆ ನೆರವು ಕೋರಿದ ಕೆಲವೇ ಗಂಟೆಗಳಲ್ಲಿ ರೋಗಿಯ ಚಿಕಿತ್ಸೆಗೆ ಹಣ ಸಂಗ್ರಹ: ಟೀಮ್ ಮಾಧ್ಯಮ ಸ್ಪಂದನದ ಮಾನವೀಯ ಕೆಲಸ

admincoorgdaily

ಮಡಿಕೇರಿ:ಜಿಲ್ಲೆಯ ಕೋತೂರು ನಿವಾಸಿ ಕಟ್ಟೆಂಗಡ ದಿಲೀಪ್ ಸೋಮಯ್ಯ ಅವರ ಪತ್ನಿ ಕಟ್ಟೆಂಗ ವಿಂದ್ಯಾ ಅವರಿಗೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಕ್ರಾನಿಯೋಪ್ಲ್ಯಾಸ್ಟಿ ಬ್ರೈನ್ ಸರ್ಜರಿ (ತಲೆಬುರುಡೆಯ ದೋಷ ಸರಿಪಡಿಸುವ ಶಸ್ತ್ರಚಿಕಿತ್ಸೆ) ನಡೆಯುತ್ತಿದ್ದು,ಸರ್ಕಾರದ ಸವಲತ್ತು ಹೊರತಾಗಿ 91,000 ರೂ ಅಗತ್ಯವಿತ್ತು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಹಾಯ ಕೋರಿ "ಟೀಮ್ ಮಾಧ್ಯಮ ಸ್ಪಂದನ" ತಂಡ ಸಾರ್ವಜನಿಕರಲ್ಲಿ ಮನವಿ ಮಾಡಿತ್ತು.ದಾನಿಗಳ ಸಹಕಾರದಿಂದ ಕೆಲವೇ ಗಂಟೆಗಳಲ್ಲಿ ಹಣ ಸಂಗ್ರಹವಾಗಿದ್ದು,ವಿಂದ್ಯಾ ಅವರ ಖಾತೆಗೆ ಹಣ ಜಮೆ ಆಗಿದೆ. ಮಾಧ್ಯಮ ಸ್ಪಂದನ ಮನವಿಗೆ ಸ್ಪಂದಿಸಿ ನೆರವು ನೀಡಿದ ಎಲ್ಲಾ ದಾನಿಗಳಿಗೆ ಮಾಧ್ಯಮ ಸ್ಪಂದನ ಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಧನ್ಯವಾದ ಸಲ್ಲಿಸಿದ್ದಾರೆ.