ಸೈನಿಕ ಕಲ್ಯಾಣ ಇಲಾಖೆ ಮತ್ತು ಪುನರ್ವಸತಿ ಇಲಾಖೆಯಲ್ಲಿ ಪೆನರಿ ಗ್ರ್ಯಾಂಟ್ ಸೌಲಭ್ಯ

Nov 20, 2025 - 18:33
 0  323
ಸೈನಿಕ ಕಲ್ಯಾಣ ಇಲಾಖೆ ಮತ್ತು ಪುನರ್ವಸತಿ ಇಲಾಖೆಯಲ್ಲಿ ಪೆನರಿ ಗ್ರ್ಯಾಂಟ್ ಸೌಲಭ್ಯ

ಮಡಿಕೇರಿ: ಸೈನಿಕ ಕಲ್ಯಾಣ ಇಲಾಖೆ ಮತ್ತು ಪುನರ್ವಸತಿ ಇಲಾಖೆಯಲ್ಲಿ ಪೆನರಿ ಗ್ರ್ಯಾಂಟ್ ಸೌಲಭ್ಯವಿದ್ದು, ಭಾರತೀಯ ಸೇನೆಯಲ್ಲಿ ೧೫ ವರ್ಷಕ್ಕಿಂತ ಕಡಿಮೆ ಅವಧಿ ಸೇವೆ ಸಲ್ಲಿಸಿ ಪಿಂಚಣಿ ಸೌಲಭ್ಯ ಪಡೆಯದ ನಿವೃತ್ತ ಸೈನಿಕರು ಪಿಂಚಣಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗೌರವ ಅಧ್ಯಕ್ಷ ಕೆ.ಪಿ.ಸೋಮಣ್ಣ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನಿವೃತ್ತ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ೧೫ ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದವರಿಗೆ ಸರ್ಕಾರ ಪಿಂಚಣಿ ಸೇವೆ ನೀಡುತ್ತಿದೆ. ಆದರೆ, ೧೫ ವರ್ಷಕ್ಕಿಂದ ಕಡಿಮೆ ಅವಧಿ ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಯಾವುದೇ ಪಿಂಚಣಿ ಸೌಲಭ್ಯವಿಲ್ಲ. ಆದ್ದರಿಂದ ನಿವೃತ್ತ ಸೈನಿಕರು, ಸೈನಿಕ ಕಲ್ಯಾಣ ಇಲಾಖೆ ಮತ್ತು ಪುನರ್ವಸತಿ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದ್ದಲ್ಲಿ ಮಾಸಿಕ ೮,೦೦೦ ಪಿಂಚಣಿ ಸೌಲಭ್ಯ ಲಭ್ಯವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಸಂಚಾಲಕರಾದ ತಳೂರು ಕಾಳಪ್ಪ ಇದ್ದರು.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 0
Sad Sad 0
Wow Wow 0