ಪೊನ್ನಂಪೇಟೆ: ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕುಂದ ಪೈಸಾರಿಗೆ ಎ‌ಎಸ್ ಪೊನ್ನಣ್ಣ ಭೇಟಿ: ಪೈಸಾರಿ ನಿವಾಸಿಗಳ ಸಮಸ್ಯೆ ಆಲಿಸಿದ ಶಾಸಕ

ಪೊನ್ನಂಪೇಟೆ: ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕುಂದ ಪೈಸಾರಿಗೆ ಎ‌ಎಸ್ ಪೊನ್ನಣ್ಣ ಭೇಟಿ:  ಪೈಸಾರಿ ನಿವಾಸಿಗಳ ಸಮಸ್ಯೆ ಆಲಿಸಿದ ಶಾಸಕ

ಪೊನ್ನಂಪೇಟೆ:ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕು ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಲಕ್ಕುಂದ ಪೈಸಾರಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವವರು ಮಂಗಳವ ಭೇಟಿ ನೀಡಿದರು. ಕಾರ್ಯನಿಮಿತ್ತ ಬೆಂಗಳೂರಿನಲ್ಲಿದ್ದ ಶಾಸಕರು, ನೇರವಾಗಿ ಮಂಗಳವಾರ ಪೈಸಾರಿ ಭಾಗಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.

 ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸ್ಥಳೀಯರು ಶಾಸಕರಲ್ಲಿ ತಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು. ಬಹುತೇಕರು ಮೂಲಭೂತ ಸೌಲಭ್ಯ ಅಭಿವೃದ್ಧಿಯ ಬಗ್ಗೆ ಮನವಿ ನೀಡಿದರು. ಕುಡಿಯುವ ನೀರು, ವಿದ್ಯುತ್, ರಸ್ತೆ ಅಭಿವೃದ್ಧಿ ಹಾಗೂ ವಿಶೇಷವಾಗಿ ಹಕ್ಕು ಪತ್ರ ಕೊಡಿಸಿ ಕೊಡುವ ಬಗ್ಗೆ ಶಾಸಕರ ಗಮನ ಸೆಳೆದರು. ಎಲ್ಲವನ್ನು ಕೂಲಂಕುಶವಾಗಿ ಪರಿಶೀಲಿಸಿ ಮಾತನಾಡಿದ, ಶಾಸಕರು, ಅಗತ್ಯ ಕನುಸಾರ ಕೂಡಲೇ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

 ಕಾಂಗ್ರೆಸ್ ಸೇರ್ಪಡೆ:

ಶಾಸಕರ ಜನಪರ ಕಾಳಜಿ, ಅಭಿವೃದ್ಧಿ ಬಗ್ಗೆ ಚಿಂತನೆ ಹಾಗೂ ಕ್ಷೇತ್ರದ ಜನರ ಬಗ್ಗೆ ಅವರು ಹೊಂದಿರುವ ಅಭಿವೃದ್ಧಿಯ ಕನಸುಗಳನ್ನು ಮೆಚ್ಚಿದ ಹಲವಾರು ಇತರೆ ಪಕ್ಷದ ಕಾರ್ಯಕರ್ತರು ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಎಲ್ಲರನ್ನೂ ಪಕ್ಷದ ಶಲ್ಯ ಹಾಕಿ ಸ್ವಾಗತಿಸಿದ ಶಾಸಕರು, ಪಕ್ಷವನ್ನು ಬಲಪಡಿಸುವುದರೊಂದಿಗೆ ಜನಸಾಮಾನ್ಯರ ಬಗ್ಗೆ ಅಪಾರ ಕಾಳಜಿ ವಹಿಸಿಕೊಂಡು ಅವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಆಹಾರ ಕಿಟ್ ವಿತರಣೆ: 

ಈ ಸಂದರ್ಭದಲ್ಲಿ ಶಾಸಕರು ಸ್ಥಳೀಯ ನಿವಾಸಿಗಳಿಗೆ ಐಟಿಡಿಪಿ ಇಲಾಖೆ ಮೂಲಕ ವಿತರಿಸಲಾಗುವ ಆಹಾರದ ಕಿಟ್ ಒದಗಿಸಿದರು. ಈ ಸಂದರ್ಭದಲ್ಲಿ ಕಾನೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್, ಪಂಚಾಯಿತಿ ಸದಸ್ಯರಾದ ಬೋಪಣ್ಣ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಮ್ಮಡ ಸೋಮಣ್ಣ, ಸ್ಥಳೀಯ ಪ್ರಮುಖರಾದ ಸಿದ್ದು ನಾಚಪ್ಪ, ಮನು, ನಿಖಿಲ್, ನಾಲ್ಕೇರಿ ವಲಯ ಅಧ್ಯಕ್ಷರಾದ ಕಟ್ಟಿ ಕಾರ್ಯಪ್ಪ, ಕೆ ಬಾಡಗ ವಲಯ ಅಧ್ಯಕ್ಷರಾದ ರವಿ, ಪಕ್ಷದ ಪ್ರಮುಖರು, ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರುಗಳು, ಸರಕಾರಿ ನಾಮನಿರ್ದೇಶಿತ ಪದಾಧಿಕಾರಿಗಳು, ತಾಲೂಕು ತಹಶೀಲ್ದಾರ್, ಐಟಿಡಿಪಿ ಅಧಿಕಾರಿಗಳು ಹಾಗೂ ಸ್ಥಳೀಯರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.