ಪೊನ್ನಂಪೇಟೆ: ಹಳ್ಳಿಗಟ್ಟು ಗ್ರಾಮದಲ್ಲಿ ಹಿರಿಯ ವ್ಯಕ್ತಿಯ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಶಾಸಕ ಎ.ಎಸ್ ಪೊನ್ನಣ್ಣ
ಪೊನ್ನಂಪೇಟೆ :ಅಭಿವೃದ್ಧಿ ಕಾರ್ಯಕ್ರಮ ಸಂದರ್ಭದಲ್ಲಿ, ಸ್ಥಳೀಯರಿಂದ ಹಿರಿಯ ಚೇತನ ಅಸೌಖ್ಯದಿಂದ ಬಳಲುತ್ತಿರುವ ಮಾಹಿತಿಯನ್ನು ಪಡೆದ ಶಾಸಕರು, ಇಂದು ಅವರನ್ನು ಭೇಟಿ ಮಾಡಿ, ಅವರಲ್ಲಿ ಧೈರ್ಯದ ಮಾತುಗಳನ್ನಾಡಿದರು. ತಾಲೂಕಿನ ಹಳ್ಳಿಗಟ್ಟು ಗ್ರಾಮದ ವಿಷ್ಣು ದೇವಸ್ಥಾನ ಬಳಿ ನಿವಾಸಿಯಾಗಿರುವ ಬೂವಡಿರ ರೇಖಾ ದೇವಯ್ಯರವರು, ವಯೋಸಹಜ ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಶಾಸಕರು ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.
ಇವರಿಗೆ ಚಿಕಿತ್ಸೆ ನೀಡುತ್ತಿರುವ ಮೈಸೂರಿನ ವೈದ್ಯರೊಂದಿಗೆ ಫೋನ್ ಮುಖಾಂತರ ಮಾತನಾಡಿ ಮಾಹಿತಿ ಪಡೆದುಕೊಂಡ ಶಾಸಕರು, ಅಗತ್ಯ ಬಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಕೆಲವು ಸಮಯ ರೇಖಾದೇವಯ್ಯ ರೊಂದಿಗೆ ಮಾತನಾಡಿ ಅವರಿಗೆ ಧೈರ್ಯ ಹೇಳಿದರು. ತಮ್ಮ ಬಿಡುವಿಲ್ಲದ ಪ್ರವಾಸ ಕಾರ್ಯಕ್ರಮದ ನಡುವೆಯೂ, ಶಾಸಕರು ವಿಷಯ ತಿಳಿದೊಡನೆ ಹಿರಿಯ ಪ್ರಜೆಯ ಆರೋಗ್ಯ ವಿಚಾರಿಸಿ ತೆರಳಿದ್ದು, ಅವರ ಜನಪರ ಇರುವ ಪ್ರೀತಿ ಹಾಗೂ ಕಾಳಜಿಗೆ ಸಾಕ್ಷಿ ಎಂದು ಮನೆಯವರು ಸಂತೋಷದಿಂದ ಹೇಳಿದರು. ಈ ಸಂದರ್ಭದಲ್ಲಿ ರೇಖಾದೇವಯ್ಯ ರವರ ಕುಟುಂಬಸ್ಥರು ಹಾಗೂ ಪಕ್ಷದ ಪ್ರಮುಖರು ರೋಹಿತ್ ರವರು ಉಪಸ್ಥಿತರಿದ್ದರು.