ಪೊನ್ನಂಪೇಟೆ ಹಿರಿಯ ನಾಗರಿಕರ ಆಶ್ರಮವಾಸಿಗಳೊಂದಿಗೆ ಕಾಲಕಳೆದ ಪೊನ್ನಂಪೇಟೆ ಪೊಮ್ಮಕ್ಕಡ ಕೂಟ

Mar 11, 2026 - 11:04
 0  903
ಪೊನ್ನಂಪೇಟೆ ಹಿರಿಯ ನಾಗರಿಕರ ಆಶ್ರಮವಾಸಿಗಳೊಂದಿಗೆ  ಕಾಲಕಳೆದ ಪೊನ್ನಂಪೇಟೆ ಪೊಮ್ಮಕ್ಕಡ ಕೂಟ

ಪೊನ್ನಂಪೇಟೆ: ಕೊಡವ ಸಮಾಜದ ಪೊಮ್ಮಕ್ಕಡ ಕೂಟದಿಂದ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಇರುವ ಹಿರಿಯ ನಾಗರಿಕರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಭೇಟಿ ನೀಡಿ ವಿವಿಧ ಕಾರ್ಯಕ್ರಮವನ್ನು ನಡೆಸಿ, ಅವರೊಂದಿಗೆ ಆತ್ಮೀಯವಾಗಿ ಕಾಲ ಕಳೆದು ವಿಚಾರ ವಿನಿಮಯ ಮಾಡಿಕೊಂಡು, ಹಣ್ಣು ಹಂಪಲುಗಳನ್ನು ವಿತರಿಸಿ, ಉಪಚರಿಸಿದರು.

 ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಅವರು ಈ ಸಂದರ್ಭ ಮಾತನಾಡಿ ನಾವೆಲ್ಲರೂ ಒಂದೇ ಕುಟುಂಬ ಎಂಬ ಭಾವನೆ ಇಟ್ಟುಕೊಳ್ಳಬೇಕು ಹಾಗೂ ಸದಾ ಆಶಾ ವಾದಿಗಳಾಗಿರಬೇಕು ಹಾಗಾದರೆ ಮಾತ್ರ ನಾವು ಸಂತೋಷದಲ್ಲಿರಲು ಸಾಧ್ಯ ಎಂದು ಹೇಳಿದರು. ಜೀವನದಲ್ಲಿ ಕಷ್ಟ ಸುಖ ಸಹಜ. ಹಿರಿಯರು ಒಂದು ಶಾಂತ ಜಾಗದ ಆಶ್ರಮದಲ್ಲಿ ನೆಲೆಸಿರುವುದು ಹಾಗೂ ಇದನ್ನು ಸ್ಥಾಪನೆ ಮಾಡಿದವರಿಗೆ ಧನ್ಯವಾದ ಸಲ್ಲಿಸಿದರು.

 ಈ ಸಂದರ್ಭ ಕೂಟದ ಗೌರವ ಕಾರ್ಯದರ್ಶಿ, ಬಲ್ಲಾಡಿಚಂಡ ಕಸ್ತೂರಿ ಸೋಮಯ್ಯ ಅವರು ಪ್ರಬಂಧ "ನಂಗಡ ಮಂಡೆಕ್ ನಂಗಡ ಕೈ "ಎಂಬ ವಿಷಯದಲ್ಲಿ ಪ್ರಬಂಧ ಮಂಡನೆಯನ್ನು ಮಾಡಿದರು. ಆಶ್ರಮದ ಹಿರಿಯರು ಮತ್ತು ಪೊಮ್ಮಕ್ಕಡ ಕೂಟದ ಆಡಳಿತ ಮಂಡಳಿ ಮತ್ತು ಸದಸ್ಯರು ನಡುವೆ ಆರೋಗ್ಯಯುತ ಮಾತು, ಚರ್ಚೆ ವಿಚಾರ ವಿನಿಮಯ ನಡೆಯಿತು.ಈ ಸಂದರ್ಭ ಹಿರಿಯ ನಾಗರಿಕ ಆಶ್ರಮ ವಾಸಿಗಳು ಇಂತಹ ಕಾರ್ಯಕ್ರಮದಿಂದ ತುಂಬಾ ಸಂತೋಷವಾಗಿದೆ, ಆಶ್ರಮ ವಾಸಿಗಳಿಗೆ ಹೊರಗಿನವರ ಸಂಪರ್ಕ ಈ ಮೂಲಕ ದೊರತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಕಸ್ತೂರಿ ಸೋಮಯ್ಯ ಸ್ವಾಗತಿಸಿ, ಮೂಕಳೆರ ಕಾವ್ಯ ಮಧು ವಂದಿಸಿದರು. ಈ ಸಂದರ್ಭ ಕೂಟದ ಜಂಟಿ ಕಾರ್ಯದರ್ಶಿ ಮೂಕಳೆರ ಆಶಾ ಪೂಣಚ್ಚ, ಮಾಣಿಪಂಡ ಪಾರ್ವತಿ ಜೋಯಪ್ಪ, ಬಲ್ಯಮೀದೇರಿರ ಆಶಾ ಶಂಕರ್, ಕಾಳಿಮಾಡ ಲತಾ ಮೋಟಯ್ಯ, ಮಂಡೆಚಂಡ ಬೇಬಿ, ಪ್ರೊ. ಇಟ್ಟಿರ ಬಿದ್ದಪ್ಪ ಮತ್ತು ಸದಸ್ಯರುಗಳು ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0