ಪೊನ್ನಂಪೇಟೆ;ಒಂದು ವರ್ಷದ ಹಿಂದೆ ಕಳೆದು ಹೋದ ಚಿನ್ನವನ್ನು ಭದ್ರವಾಗಿ ತೆಗೆದಿರಿಸಿಕೊಂಡು, ಚಿನ್ನ ಕಳೆದುಕೊಂಡ ಮಹಿಳೆಗೆ ವಾಪಸ್ ನೀಡಿದ ಬಸವೇಶ್ವರ ದೇಗುಲದ ಅರ್ಚಕ

Feb 16, 2026 - 21:07
 0  980
ಪೊನ್ನಂಪೇಟೆ;ಒಂದು ವರ್ಷದ ಹಿಂದೆ ಕಳೆದು ಹೋದ ಚಿನ್ನವನ್ನು ಭದ್ರವಾಗಿ ತೆಗೆದಿರಿಸಿಕೊಂಡು, ಚಿನ್ನ ಕಳೆದುಕೊಂಡ ಮಹಿಳೆಗೆ ವಾಪಸ್ ನೀಡಿದ ಬಸವೇಶ್ವರ ದೇಗುಲದ ಅರ್ಚಕ

ಪೊನ್ನಂಪೇಟೆ :ಬಸವೇಶ್ವರ ದೇವಾಲಯಕ್ಕೆ ಮಹಿಳೆಯೊಬ್ಬರು ಪೂಜೆಗೆಂದು ಕಳೆದ ಒಂದು ವರ್ಷಗಳ ಹಿಂದೆ ಆಗಮಿಸಿದಾಗ ತನ್ನ ಚಿನ್ನದ ಬ್ರಾಸ್ ಲೈಟ್ ಕಳೆದುಕೊಂಡಿದ್ದರು. ಅಲ್ಲಿನ ಅರ್ಚಕರಾದ ಪಂಚಾಕ್ಷರಿ ಅವರಿಗೆ ಈ ಚಿನ್ನದ ಬ್ರಾಸ್ ಲೈಟ್ ಸಿಕ್ಕಿದ್ದು, ಕಳೆದುಕೊಂಡವರು ಯಾರೆಂದು ತಿಳಿಯದೆ ಭದ್ರವಾಗಿ ಅದನ್ನು ತೆಗೆದಿರಿಸಿಕೊಂಡಿದ್ದರು.

 

ಶಿವರಾತ್ರಿ ದಿನ ಈ ಮಹಿಳೆ ದೇವಸ್ಥಾನಕ್ಕೆ ಆಗಮಿಸಿ ತಾನು ಕಳೆದುಕೊಂಡ ಚಿನ್ನದ ಬ್ರಾಸ್ ಲೈಟ್ ವಿಚಾರವಾಗಿ ಚಿನ್ನ ಕಳೆದುಕೊಂಡ ಜಾಗ ತಿಳಿಯದಿರುವ ಬಗ್ಗೆ ಮಾಹಿತಿ ನೀಡಿದಾಗ, ಇಲ್ಲಿನ ಅರ್ಚಕರಾದ ಪಂಚಾಕ್ಷರಿಯವರು ತನ್ನ ಬಳಿ ಇರಿಸಿಕೊಂಡಿದ್ದ ಬ್ರಾಸ್ ಲೈಟ್ ನ ಪೂರ್ಣ ವಿವರ ಪಡೆದು ಇದು ಅವರಿಗೆ ಸೇರಿದ್ದು ಎಂದು ಖಾತ್ರಿಪಡಿಸಿ ಚಿನ್ನದ ಆಭರಣವನ್ನು ಹಸ್ತಾಂತರಿಸಿ ಚಿನ್ನ ಕಳೆದುಕೊಂಡ ಮಹಿಳೆಯ ಆನಂದ ಬಾಷ್ಪಕ್ಕೆ ಅರ್ಚಕರು ಸಾಕ್ಷಿಯಾದರು.

ಒಂದು ವರ್ಷಗಳ ಹಿಂದೆ ಬಿದ್ದು ಸಿಕ್ಕಿದ ಚಿನ್ನದ ಆಭರಣವನ್ನು ವಾಪಸ್ ನೀಡಿದ ಅರ್ಚಕರಾದ ಪಂಚಾಕ್ಷರಿ ಯವರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.

What's Your Reaction?

Like Like 4
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1