ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ:ನಾಲ್ವರು ಪತ್ರಕರ್ತರಿಗೆ ಪ್ರಶಸ್ತಿ ; ಇಸ್ಮಾಯಿಲ್ ಕಂಡಕರೆಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಚಿತ್ರರಂಗ ವರದಿ ಪ್ರಶಸ್ತಿ
ಗೋಣಿಕೊಪ್ಪ ; ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟಿಸಲಾಗಿದ್ದು, ನಾಲ್ವರಿಗೆ ಪ್ರಶಸ್ತಿ ಲಭಿಸಿದೆ.
ತಾಲೂಕು ಮಟ್ಟದ ಪ್ರಶಸ್ತಿಗೆ ಪತ್ರಕರ್ತ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ತಮ್ಮ ಸೋದರ ಮಾವಂದಿಯರಾದ ದೇಯಂಡ ಪೂಣಚ್ಚ ಹಾಗೂ ಉಮೇಶ್ ಜ್ಞಾಪಕಾರ್ಥದ ಗ್ರಾಮೀಣ ವರದಿ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಜಗದೀಶ್ ಜೋಡುಬೀಟಿ ಅವರ ಅಂತ್ಯ ಸಂಸ್ಕಾರ ಸಮಸ್ಯೆಗೆ ಮುಕ್ತಿ ವರದಿ, ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯರಾಗಿದ್ದ ಎಸ್. ಎ. ಮುರುಳಿಧರ್ ಅವರು ತಮ್ಮ ಸಹೋದರ ಗಣೇಶ್ ಜ್ಞಾಪಕಾರ್ಥದ ಕ್ರೀಡಾ ವರದಿ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಜಗದೀಶ್ ಜೋಡುಬೀಟಿ ಅವರ ಶಾಲೆಗಳಲ್ಲಿ ಮೈದಾನದ ಕೊರತೆ ವರದಿ ಪಡೆದುಕೊಂಡಿತು. ವಿರಾಜಪೇಟೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ಅವರು ತಮ್ಮ ತಂದೆ ಸಣ್ಣುವಂಡ ಮಾದಪ್ಪ, ತಾಯಿ ಜಾನಕಿ ಮಾದಪ್ಪ ಜ್ಞಾಪಕಾರ್ಥವಾಗಿ ಸ್ಥಾಪಿಸಿರುವ ಅತ್ಯುತ್ತಮ ಪರಿಸರ ಪ್ರಶಸ್ತಿಗೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಚೀರಂಡ ಎಂ. ಚಂಗಪ್ಪ ಅವರ ಭತ್ತ ಕೃಷಿಗೆ ಅನ್ನದಾತರ ನಿರಾಸಕ್ತಿ ವರದಿ ಪಡೆದುಕೊಂಡಿದೆ.
ಜಿಲ್ಲಾ ಮಟ್ಟದ ಪ್ರಶಸ್ತಿ;
ಸಣ್ಣುವಂಡ ಕೆ. ವಿನಯ್ ಅಯ್ಯಪ್ಪ ಅವರು, ತನ್ನ ತಾಯಿ, ಮೇರು ನಟಿ ಸಣ್ಣುವಂಡ ಶಶಿಕಲಾ ಕಾವೇರಪ್ಪ ಜ್ಞಾಪಕಾರ್ಥದ ಚಿತ್ರರಂಗ ಜಿಲ್ಲಾ ಪ್ರಶಸ್ತಿಗೆ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟಗೊಂಡ ಕೆ. ಎಂ. ಇಸ್ಮಾಯಿಲ್ ಕಂಡಕೆರೆ ಅವರ ಸಿನಿಮಾ ರಂಗಕ್ಕೆ ಕಾಲಿಟ್ಟ ಕೊಡಗಿನ ಬೆಡಗಿ ವರದಿ ಪಡೆದುಕೊಂಡಿದೆ. ಸಂಘದ ನಿರ್ದೇಶಕ ಬಿ. ವಿ. ಸಂತೋಷ್ ರೈ ಅವರು ತಮ್ಮ ತಾಯಿ ಬಿ. ವಿ. ಸುಮತಿ ರೈ ಅವರ ಜ್ಞಾಪಕಾರ್ಥ ನೀಡಿರುವ ಮಾನವೀಯ ಜಿಲ್ಲಾ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟಗೊಂಡ ಎಚ್. ಕೆ. ಜಗದೀಶ್ ಅವರ ಹೆತ್ತವರ ಮಡಿಲು ಸೇರಿದ ನಾಪ್ತತೆಯಾಗಿದ್ದ ಕಂದಮ್ಮ ವರದಿ ಪಡೆದುಕೊಂಡಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಎನ್. ದಿನೇಶ್ ತಿಳಿಸಿದ್ದಾರೆ.

