ಅ.10(ನಾಳೆ) ಜಿಲ್ಲೆಯ ವಿವಿಧೆಡೆ ವಿದ್ಯುತ್ ವ್ಯತ್ಯಯ: ನಿಮ್ಮೂರಿನಲ್ಲಿ ನಾಳೆ ಕರೆಂಟ್ ಇರುತ್ತಾ!
ಮಡಿಕೇರಿ:66/33/11 ಕೆ.ವಿ ವಿರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದ ವಿರಾಜಪೇಟೆ ಶಾಖಾ ವ್ಯಾಪ್ತಿಯ ಬಿ.ಶೆಟ್ಟಿಗೇರಿ ಮಾರ್ಗದಲ್ಲಿ ದಿನಾಂಕ 10.10.2025 ರಂದು ಬೆಳಗ್ಗೆ 09.00ರಿಂದ ಸಂಜೆ 5.00 ಗಂಟೆಯವರೆಗೆ ಕೊಡಗು ವಿದ್ಯುತ್ ಜಾಲದ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಸದರಿ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ವಿರಾಜಪೇಟೆ ಪಟ್ಟಣದ ಪಂಜರಪೇಟೆ, ಕಲ್ಲುಬಾಣೆ, ನಿಸರ್ಗ ಬಡಾವಣೆ, ಕಾವೇರಿ ಕಾಲೇಜು, ಚಾಮುಂಡಿ ಬಡಾವಣೆ ಮತ್ತು ಬಿ ಶೆಟ್ಟಿಗೇರಿ ಫೀಡರ್ ಬಿಟ್ಟಂಗಾಲ, ಬಾಳುಗೋಡು, ವಿ ಬಾಡಗ, ಕುಟ್ಟಂದಿ, ಕೊಂಗಾಣ, ಟಿ ಶೆಟ್ಟಿಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ ಚೆಸ್ಕಾಂ ಅಧಿಕಾರಿಗಳು ಕೋರಿದ್ದಾರೆ.