ಸಿದ್ದಾಪುರದ ಪ್ರವೀಣ್ ಅವರಿಗೆ ಯುವ ಸಾಮಾಜಿಕ ಕಾರ್ಯಕರ್ತ-ಯಂಗ್ ಕಮ್ಯೂನಿಟಿ ಪ್ರಶಸ್ತಿ
admincoorgdaily
ಮಡಿಕೇರಿ:ನಿಫಾ (ನ್ಯಾಶನಲ್ ಇಂಟೆಗ್ರೇಟೆಡ್ ಫಾರಂ ಆಫ್ ಆರ್ಟಿಸ್ಟ್ಸ್ & ಆಕ್ಟಿವಿಸ್ಟ್ಸ್) ಸಿಲ್ವರ್ ಜ್ಯೂಬಿಲಿ ಅಂಗವಾಗಿ ನಿಫಾ ಮತ್ತು ವರ್ಲ್ಡ್ ರೆಕಾರ್ಡ್ಸ್ ಆಫ್ ಎಕ್ಸೆಲೆನ್ಸ್ ಇಂಗ್ಲೆಂಡ್, ಭಾರತದಾದ್ಯಂತ ಇರುವ ಎಲ್ಲಾ ರಾಜ್ಯಗಳ ಎಲ್ಲಾ ಜಿಲ್ಲೆಗಳಿಂದಲೂ ಆಯ್ದ ಸಮಾಜಸೇವಕರಿಗಾಗಿ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಏಕತಾ ರ್ಯಾಲಿಯಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ರಾಷ್ಟ್ರೀಯ ಯುವ ಸಾಮಾಜಿಕ ಕಾರ್ಯಕರ್ತ-ಯಂಗ್ ಕಮ್ಯುನಿಟಿ ಚಾಂಪಿಯನ್ ಪುರುಷ ವಿಭಾಗದಲ್ಲಿ ಶ್ರೀ ಪ್ರವೀಣ್ ಸಿದ್ಧಾಪುರ ರವರು ಹಾಗೂ ಮಹಿಳಾ ವಿಭಾಗದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಕೊಡಗು ಮೂಲದ ಗಾಯತ್ರಿ ಆರ್. ರವರು ಹರಿಯಾಣದ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಶ್ರೀ ರಾವ್ ನರ್ಬೀರ್ ಸಿಂಗ್ ರವರಿಂದ ರಾಷ್ಟ್ರಮಟ್ಟದ ಜಿಲ್ಲಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.