ನಾಳೆಯಿಂದ ಜು.12ರವರೆಗೆ ರಾಜಾಸೀಟ್ ಬಂದ್ :ಭೂಕುಸಿತದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶ
admincoorgdaily

ಮಡಿಕೇರಿ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಭೂಕುಸಿತವಾದ ಹಿನ್ನೆಲೆ ಮತ್ತು ತಾತ್ಕಾಲಿಕ ಮಾರ್ಗ ಬದಲಾವಣೆಯಿಂದ ಉಂಟಾದ ವಾಹನ ದಟ್ಟಣೆ ಹಾಗೂ ರಾಜಾಸೀಟ್ ಬಳಿ ವಾಹನ ನಿಲುಗಡೆಯಿಂದ ಸಮಸ್ಯೆಯಾಗುತ್ತಿರುವ ಕಾರಣ ಮಡಿಕೇರಿ ರಾಜಾಸೀಟ್ ಉದ್ಯಾನವನವನ್ನು ನಾಳೆಯಿಂದ ಜುಲೈ 12ರವರೆಗೆ ಬಂದ್ ಮಾಡಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಈ ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ರಾಜಾಸೀಟ್‌ಗೆ ಸಾರ್ವಜನಿಕರು/ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.