ದಬ್ಬಾಳಿಕೆ, ದರ್ಪದಿಂದ ರಸ್ತೆ ಅಗಲೀಕರಣ:ವಿರಾಜಪೇಟೆ ನಾಗರಿಕ ಸಮಿತಿ ಆರೋಪ

ದಬ್ಬಾಳಿಕೆ, ದರ್ಪದಿಂದ ರಸ್ತೆ ಅಗಲೀಕರಣ:ವಿರಾಜಪೇಟೆ ನಾಗರಿಕ ಸಮಿತಿ ಆರೋಪ

ವಿರಾಜಪೇಟೆ: ನಗರ ಅಭಿವೃದ್ದಿ, ರಸ್ತೆ ಆಗಲೀಕರಣಕ್ಕೆ ನಮ್ಮ ವಿರೋಧ ಇಲ್ಲ. ಬದಲಿಗೆ ಶತಮಾನಗಳಿಂದ ನಗರದಲ್ಲಿ ಜೀವನ ಸಾಗಿಸುವ ಮಂದಿಯನ್ನು ಬೀದಿಗೆ ಬರುವಂತೆ ಮಾಡಬೇಡಿ, ಪರ್ಯಾಯ ಮಾರ್ಗದ ಚಿಂತನೆ ನಡೆಸಿ, ನ್ಯಾಯಯುತ ಪರಿಹಾರ ನೀಡಲು ಮುಂದಾಗಿ ಎಂದು ನಗರ ರಸ್ತೆ ಬದಿಯ ನಾಗರಿಕರ ಬೇಡಿಕೆಯಾಗಿತ್ತು.

 ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಾ. ಇ.ಆರ್. ದುರ್ಗಾಪ್ರಸಾದ್ ಅವರು, ದಿನದಿಂದ ದಿನಕ್ಕೆ ವಿರಾಜಪೇಟೆ ನಗರ ಮುಂದುವರೆಯುತ್ತಾ ಬಂದಿದೆ.ಆದರೆ ಇದೀಗ ಅಭಿವೃದ್ದಿ ಹೆಸರಿನಲ್ಲಿ ಇತಿಹಾಸ ಪ್ರಸಿದ್ದ ವಿರಾಜಪೇಟೆ ನಗರ ಕಣ್ಮರೆಯಾಗುವತ್ತಾ ಮುಂದಾಗಿದೆ. ನಗರ ಅಭಿವೃದಿಗೆ ಪೂರಕವಾಗಿ ಶ್ರಮಿಸುತ್ತಿರುವ ಶಾಸಕರು ಒತ್ತಾಯದಿಂದ ಬಲವಂತದಿಂದ ರಸ್ತೆ ಬದಿಯ ಮನೆ ಕಟ್ಟಡಗಳನ್ನು ಕೆಡವಲು ನಾವು ಹೇಳುವುದಿಲ್ಲ ಎಂದು ಆಶ್ವಾಸನೆ ನೀಡಿದ್ದರು.

ಆದರೆ ಪಕ್ಷದ ಹಿಂಬಾಲಕರು ದರ್ಪ ತೋರಿ ದಬ್ಬಾಳಿಕೆ ನಡೆಯೊಂದಿಗೆ ಮಣ್ಣು ತೆಗೆಯುವ ಯಂತ್ರದ ಮೂಲಕ ಕೆಡವುತ್ತೇವೆ ಎಂದು ಬೆದರಿಕೆ ನೀಡುತ್ತಿರುವುದು ನ್ಯಾಯಯುತವಲ್ಲ. ನಗರದ ಮುಖ್ಯ ರಸ್ತೆಯ ಇಕ್ಕಲಗಳಲ್ಲಿ ವಾಸ ಮಾಡುತ್ತಿರುವ 98 ಮಂದಿ ರಸ್ತೆ ಆಗಲೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಕೀಲರಾದ ರವೀಂದ್ರನಾಥ್ ಕಾಮತ್ ಅವರ ಮೂಲಕ ಎರಡು ದಾವೆ ಹಾಕಿದ್ದಾರೆ.

ಅಲ್ಲದೆ ವಕೀಲರಾದ ಎಂ.ಪಿ.ಸಜನ್ ಪೂವಯ್ಯ ಅವರು ಪ್ರತ್ಯೇಕ ದಾವೆ ಹೂಡಿದ್ದಾರೆ. ಉಚ್ಚ ನ್ಯಾಯಾಲಯದಲ್ಲಿ ಹೂಡಿರುವ ರಿಟ್ ಆರ್ಜಿ ಹಿಂಪಡೆಯಲಾಗಿದೆ.ಯಾವುದೇ ತಡೆಯಾಜ್ಞೆ ಇಲ್ಲವಾಗಿದೆ. ಕಟ್ಟಡಗಳನ್ನು ಒಡೆಯುತ್ತೇವೆ ಎಂದು ಕೆಲವು ಕಾಂಗ್ರೆಸಿಗರು ಪ್ರಚಾರ ಪಡಿಸುತ್ತಿದ್ದಾರೆ. ಇದು ಶುದ್ಧ ಸುಳ್ಳು. ನಿವೇಶನ, ಮನೆ ಮತ್ತು ಕಟ್ಟಡ ಕಳೆದುಕೊಳ್ಳುವ ನಿವಾಸಿಗಳಿಗೆ ನ್ಯಾಯಬದ್ದ ಸರ್ಕಾರ ನಿಗದಿಪಡಿಸಿದ ಪರಿಹಾರ ನೀಡಿ ರಸ್ತೆ ಅಗಲೀಕರಣಕ್ಕೆ ಮುಂದಾಗಿ, ಪ್ರಕರಣ ನ್ಯಾಯಲಯದಲ್ಲಿರುವ ಸಂದರ್ಭದಲ್ಲಿ ರಸ್ತೆ ಆಗಲೀಕರಣ ಮುಂದಾಗಿರುವುದು ಕಾನೂನು ಉಲ್ಲಂಘನೆ ಮಾಡಿದಂತೆ.

 ಕಾನೂನು ಬಗ್ಗೆ ಅರಿವುಹೊಂದಿರುವ ಪುರಸಭೆಯ ಮುಖ್ಯಾಧಿಕಾರಿಗಳು ದರ್ಪತೋರಿಸಿ ತೆರವು ಮಾಡುವಂತೆ ಒತ್ತಾಯಪಡಿಸುತ್ತಿರುವುದು ಕಾಂಗ್ರೇಸ್ ಪಕ್ಷದ ಕೈಗೊಂಬೆಯಂತೆ ವರ್ತನೆ ಮಾಡುತ್ತಿರುವುದು ಅಧಿಕಾರಿಗೆ ಶೋಭೆಯಲ್ಲಾ ಎಂದು ಆರೋಪಿಸಿದರು.

ವಕೀಲ ಟಿ.ಪಿ ಕೃಷ್ಣ ಮಾತನಾಡಿ ನಗರದಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ರಸ್ತೆ ಆಗಲೀಕರಣದ ಪಾಠ 2019ರಲ್ಲಿ ಆರಂಭ ಮಾಡಲಾಯಿತು. ಅದೇ ಸಂದರ್ಭದಲ್ಲಿ ರಾಜ್ಯದಲ್ಲಿ ಭಾ.ಜ.ಪ ಸರ್ಕಾರ ಆಳ್ವಿಕೆಯಿತ್ತು.ಕಾಂಗ್ರೆಸ್ ಪಕ್ಷದ 80 ರಷ್ಟು ನಾಯಕರು ರಸ್ತೆ ಅಗಲೀಕರಣ ವಿರುದ್ದ ಧ್ವನಿ ಎತ್ತಿದ್ದರು ಮತ್ತು ವಿರೋಧಿಸಿದರು. ಆದರೆ ಇಂದು,ಅಂದೂ ವಿರೋಧ ವ್ಯಕ್ತಪಡಿಸಿದ ನಾಯಕರು ಇಂದು ರಸ್ತೆ ಆಗಲೀಕರಣಕ್ಕೆ ಸಾಥ್ ನೀಡುತ್ತಾ ಬೆದರಿಕೆ ಮಂತ್ರಪಠಿಸುತ್ತಾ ನಿವಾಸಿಗಳಿಗೆ ತೆರವು ಮಾಡಿ ಎಂದು ಒತ್ತಡ ಹೇರುತ್ತಿರುವ ವ್ಯಾಖ್ಯಾನದ ಹಿಂದೆ ಲಾಭದಾಯಕದ ಅಂಶವಿದೆ ಎಂದು ಆರೋಪಿಸಿದರು.

 ಪರ್ಯಾಯ ಮಾರ್ಗ ಸೂಚಿಸಿದರು ಅದನ್ನು ಕೈಬಿಟ್ಟು ನಗರ ರಸ್ತೆಯ ಅಭಿವೃದ್ದಿಗೆ ಮುಂದಾಗಿದ್ದಾರೆ. ನಗರಾಭಿವೃದ್ದಿ ಬಗ್ಗೆ ನಮ್ಮ ವಿರೋದವಿಲ್ಲ.ಆದರೆ ಪರಿಹಾರ ನೀಡಿ.ರಸ್ತೆ ಅಗಲೀಕರಣ ಮುಂದಿನ 50 ವರ್ಷಗಳ ಮುಂದಾಲೋಚನೆ ಒಳಗೊಂಡಂತೆ ಅಭಿವೃದ್ದಿ ಮುಂದಾಗಬೇಕು. ಇದೀಗ 30 ಅಡಿ ನಂತರ 50 ಆಡಿ ಎಂದಾದಲ್ಲಿ ನಮ್ಮ ಮುಂದಿನ ಪೀಳಿಗೆಗಳು ಸಹ ನ್ಯಾಯಾಲಯಕ್ಕೆ ಮೊರೆ ಹೋಗುವ ಪರಿಸ್ಥಿತಿ ಎದುರಾಗಬಹುದು ಎಂದು ಆರೋಪಿಸಿದರು. ಪತ್ರಿಕಾಗೋಷ್ಟಿಯಲ್ಲಿ ನೆಲ್ಲಮಕ್ಕಡ ರೋಷನ್ ಗಣಪತಿ ಉಪಸ್ಥಿತರಿದ್ದರು.