ಕಾಕೋಟು ಪರಂಬುವಿನಲ್ಲಿ ಶಾಸಕ‌‌ ಎಎಸ್ ಪೊನ್ನಣ್ಣ ಅವರ ಅನುದಾನದಲ್ಲಿ ರಸ್ತೆ ಕಾಮಗಾರಿ ಪೂರ್ಣ

ಕಾಕೋಟು ಪರಂಬುವಿನಲ್ಲಿ ಶಾಸಕ‌‌ ಎಎಸ್ ಪೊನ್ನಣ್ಣ ಅವರ ಅನುದಾನದಲ್ಲಿ ರಸ್ತೆ ಕಾಮಗಾರಿ ಪೂರ್ಣ

ವಿರಾಜಪೇಟೆ: ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಪೊನ್ನಣ್ಣ ರವರ ಅನುದಾನದಲ್ಲಿ ನಾಲ್ಕೇರಿ ಕಾಕೋಟು ಪರಂಬು ಹೆಮ್ಮಾಡು ಗ್ರಾಮದ ತೋರೆರ ಕುಟುಂಬದ ಸುನಿ ಸುಬ್ಬಯ್ಯನವರ ಮನೆಯ ಕಡೆಗೆ ಹೋಗುವ ರಸ್ತೆ ಹಾಗೂ ಅದೇ ಗ್ರಾಮದ ಚೆರುವಾಳಂಡ ಕುಟುಂಬದ ರಸ್ತೆ ಕಾಂಕ್ರಿಟೀಕರಣ ಪೂರ್ಣಗೊಂಡಿದೆ.

 ಈ ರಸ್ತೆಯ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಒದಗಿಸಿಕೊಟ್ಟಂತ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರಿಗೂ, ಇದಕ್ಕೆ ಸಹಕರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ ರವರಿಗೂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಣ ರಂಜಿ ಪೂಣಚ್ಚ ರವರಿಗೂ, ವಲಯ ಅಧ್ಯಕ್ಷರಾದ ಮಂಡೇಟಿರಾ ಅನಿಲ್ ಅಯ್ಯಪ್ಪ ರವರಿಗೂ ಹಾಗೂ ರಸ್ತೆ ಗುತ್ತಿಗೆದಾರರಿಗೆ ಸುನಿ ಸುಬ್ಬಯ್ಯ, ಉಮೇಶ್, ಸತೀಶ ಚೆರುವಾಳಂಡ, ಗಗನ್ ಸೋಮಣ್ಣ, ಪಳೆಯಂಡ ನಿಖಿಲ್, ಮತ್ತು ಗ್ರಾಮಸ್ಥರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.