ಗ್ರಾಮೀಣ ಕ್ರೀಡಾಕೂಟ ಕೆಸರುಗದ್ದೆ ಈಗಲೂ ಯುವಕರನ್ನು ಆಕರ್ಷಿಸುವ ಕ್ರೀಡೆಯಾಗಿದೆ:ಶಾಸಕ ಎಎಸ್ ಪೊನ್ನಣ್ಣ

Aug 9, 2026 - 22:15
 0  37
ಗ್ರಾಮೀಣ ಕ್ರೀಡಾಕೂಟ ಕೆಸರುಗದ್ದೆ ಈಗಲೂ ಯುವಕರನ್ನು ಆಕರ್ಷಿಸುವ ಕ್ರೀಡೆಯಾಗಿದೆ:ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ;ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ರವರು ಆಯೋಜಿಸಿದ ಕೆಸರುಗದ್ದೆ ಕ್ರೀಡಾಕೂಟದ ಮುಖ್ಯ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.

   ವಿರಾಜಪೇಟೆ ತಾಲೂಕಿನ ಕೊಮ್ಮೆತೋಡು ಗ್ರಾಮದಲ್ಲಿ ಈ ಕ್ರೀಡಾಕೂಟವು ಆಯೋಜನೆಗೊಂಡಿದ್ದು, ಕ್ರೀಡಾಕೂಟಕ್ಕೆ ಶುಭ ಕೋರುತ್ತಾ ಮಾತನಾಡಿದ ಶಾಸಕರು, ಕೊಡಗಿನ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಪ್ರಸಿದ್ಧ ಗ್ರಾಮೀಣ ಕ್ರೀಡಾಕೂಟವಾದ ಕೆಸರುಗದ್ದೆ ಈಗಲೂ ಯುವಕರನ್ನು ಆಕರ್ಷಿಸುವ ಕ್ರೀಡೆಯಾಗಿದೆ. ವೈಜ್ಞಾನಿಕವಾಗಿ ಗಮನಿಸಿದರೆ, ನಮ್ಮ ಪೂರ್ವಜರು ಗದ್ದೆಯಲ್ಲಿ ನಾಟಿ ಚಟುವಟಿಕೆ ಆರಂಭಿಸುವ ಮೊದಲು ಈ ಕ್ರೀಡೆಯನ್ನು ಹಿಂದಿನಿಂದಲೂ ಆಯೋಜಿಸುತ್ತಾ ಬಂದಿದ್ದಾರೆ. ಇದರಿಂದಾಗಿ ಗದ್ದೆಯ ಮಣ್ಣು ಮತ್ತಷ್ಟು ಫಸಲು ನೀಡಲು ಯೋಗ್ಯವಾಗಿ ಮಾರ್ಪಾಡುವುದನ್ನು ಹಿಂದಿನಿಂದಲೇ ಮನಗಂಡಿದ್ದ ನಮ್ಮ ಪೂರ್ವಜರು, ಕ್ರೀಡಾ ರೂಪದಲ್ಲಿ ಈ ಕೆಲಸವನ್ನು ಮಾಡಿ ತಮ್ಮ ಜೀವನಕ್ಕೆ ಆದಾಯವಾದ ಬೇಸಾಯಕ್ಕೆ ಅನುವು ಮಾಡುವ ಕಾರ್ಯಕ್ರಮ ಹೊಂದಿದ್ದರು. ಇಂತಹ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಿದ ಸ್ಪೋರ್ಟ್ಸ್ ಅಕಾಡೆಮಿ ಅವರಿಗೆ ಹಾಗೂ ಸಮಸ್ತರಿಗೆ ಶುಭವಾಗಲಿ ಎಂದು ಹಾರೈಸಿದರು.

ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಗೌರವ ಅಧ್ಯಕ್ಷರಾದ ಅಕ್ಕಳತಂಡ ಎಸ್ ಮೊಯ್ದು,ಅಧ್ಯಕ್ಷರು ಆಲೀರ ಎಂ ರಶೀದ್, ಹಿರಿಯ ಉಪಾಧ್ಯಕ್ಷರು ಕುಂಇ ಅಬ್ದುಲ್ಲಾ, ಎಸ್ ಸೂಫಿ, ರಜಕ್, ಪ್ರಧಾನ ಕಾರ್ಯದರ್ಶಿ ಮೀತಲ್ ತಂಡ ಎಂ ಇಸ್ಮಾಯಿಲ್, ಕಾರ್ಯದರ್ಶಿ ಅಶ್ರಫ್, ಕ್ರೀಡಾ ಸಂಚಾಲಕರು ಅಂದಾಯಿ, ಅಶ್ರಫ್, ನಿರ್ದೇಶಕರು ಶಾಫಿಕ್, ಹಂಸ, ಸಿರಾಜ್, ಮುನ್ನ,ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಹನೀಫ್, ವಿರಾಜಪೇಟೆ ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ರಫೀಕ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ಮಡಿಕೇರಿ ಬ್ಲಾಕ್ ಅಧ್ಯಕ್ಷರು ಹಂಸ, ನಾಪೋಕ್ಲು ಬ್ಲಾಕ್ ಮಾಜಿ ಅಧ್ಯಕ್ಷರು ಇಸ್ಮಾಯಿಲ್, ಪ್ರಮುಖರು ಚೆಕ್ಕು, ಅನಿಲ್, ಅಜ್ಜಿಕುಟ್ಟಿರ ಗಿರೀಶ್, ಕುಂಡಚ್ಚಿರ ಮಂಜು ದೇವಯ್ಯ,ಭವಿನ್, ಸೋಮಣ್ಣ ಬಿಎ, ಕೆ ಎಂ ಬಾವ, ಸುಬೈರ್, ಹಾಗೂ ಪ್ರಮುಖರು ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0