ನಾಪೋಕ್ಲುವಿನಲ್ಲಿ ಎಸ್ ಎನ್ ಡಿ ಪಿ ವತಿಯಿಂದ ಸಂಭ್ರಮದಿಂದ ಜರುಗಿದ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆ

ನಾಪೋಕ್ಲುವಿನಲ್ಲಿ ಎಸ್ ಎನ್ ಡಿ ಪಿ ವತಿಯಿಂದ ಸಂಭ್ರಮದಿಂದ ಜರುಗಿದ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆ

ವರದಿ:ಝಕರಿಯ ನಾಪೋಕ್ಲು 

ನಾಪೋಕ್ಲು :ನಾಪೋಕ್ಲುವಿನ ಎಸ್ ಎನ್ ಡಿ ಪಿ ಶಾಖೆ ವತಿಯಿಂದ ಆಯೋಜಿಸಲಾದ 171ನೇ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆ ಸಮಾರಂಭವು ವಿವಿಧ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು.

ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಆಶೀರ್ವಚನ ನೀಡಿ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಮಾತನಾಡಿ ಶ್ರೀ ನಾರಾಯಣ ಗುರುಗಳು ಜಾಗತಿಕವಾಗಿ ತತ್ವ ಸಂದೇಶಗಳನ್ನು ತಮ್ಮ ಮನಸ್ಸಿನಲ್ಲಿಟ್ಟುಕೊಂಡು ಜಗತ್ತಿನಲ್ಲಿರುವ ಮಾನವ ಕುಲ, ಎಲ್ಲಾ ಧರ್ಮಗಳ ಸಾರ, ಆಧ್ಯಾತ್ಮಿಕ ಚಿಂತನೆಗಳು ಒಂದೇ ಎಂಬ ದಿವ್ಯ ಸಂದೇಶವನ್ನು 170 ವರ್ಷಗಳ ಹಿಂದೆ ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿಯಾಗಿದ್ದಾರೆ. ನಮ್ಮ ದೇಶವು ಆಧ್ಯಾತ್ಮಿಕವಾಗಿ ಸ್ವಂತ ತನ್ನ ತತ್ವವನ್ನು ಇಟ್ಟುಕೊಂಡಿರುವ ದೇಶ. ಇಲ್ಲಿ ಯಾರಿಗೂ ಆಧ್ಯಾತ್ಮಿಕತೆಯ ಜಾಗೃತಿ ಮೂಡಿಸುವ ಅವಶ್ಯಕತೆ ಇಲ್ಲ. ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ಧರ್ಮದಲ್ಲೇ ಹುಟ್ಟಿ ಧರ್ಮದಲ್ಲೇ ಬೆಳೆದು ಧರ್ಮದಲ್ಲೇ ತನ್ನ ಕೊನೆಯನ್ನು ಕಾಣುತ್ತಾನೆ. ಆದ್ದರಿಂದ ಇಲ್ಲಿರುವ ಪ್ರತಿಯೊಬ್ಬ ಪ್ರಜೆಯೂ ತಮ್ಮ ಧರ್ಮವನ್ನು ಆತ್ಮೀಯವಾಗಿ ಸ್ಮರಿಸುತ್ತಾರೆ ಎಂದರು.ಅದರಂತೆ ಶ್ರೀ ನಾರಾಯಣ ಗುರುಗಳು ತಮ್ಮ ತತ್ವ ಆದರ್ಶ ಸಿದ್ಧಾಂತಗಳನ್ನು ಜಗತ್ತಿನಾದ್ಯಂತ ಸಾರಿ ಧರ್ಮದ ತತ್ವವನ್ನು ಮೀರಿ ಯಾರೂ ಹೊರ ಹೋಗಬಾರದೆಂದು ಸಂಘಟನೆಯನ್ನು ಹುಟ್ಟು ಹಾಕಿದಂತವರು. ಅದರಂತೆ ನಮ್ಮ ಜಿಲ್ಲೆಯಲ್ಲಿಯೂ ಸಂಘಟನೆಯನ್ನು ಹುಟ್ಟುಹಾಕಿ ಎಲ್ಲರನ್ನೂ ಧರ್ಮದ ತಲಹದಿಯಲ್ಲಿ ಒಗ್ಗೂಡಿಸಿಕೊಂಡು ಸಮಾಜವನ್ನು ಸಂಘಟಿಸಿ ಮುನ್ನೆಲೆಗೆ ತೆಗೆದುಕೊಂಡು ಹೋಗುವಂತಹ ಕಾರ್ಯವನ್ನು ನಾವೆಲ್ಲರೂ ಗೌರವಿಸಬೇಕು. ಮುಂದೆ ಇದೇ ರೀತಿ ಶ್ರೀ ನಾರಾಯಣ ಗುರುಗಳ ತತ್ವ ಆದರ್ಶ ಗುಣಗಳನ್ನು ಮುಂದಿಟ್ಟು ಸೌಹಾರ್ದತೆಯ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನಾಪೋಕ್ಲು ಜುಮಾ ಮಸೀದಿಯ ಖತೀಬಾರಾದ ಹಾಫಿಲ್ ಶೌಕತ್ ಅಲಿ ಸಖಾಫಿ ಮಾತನಾಡಿ ಜಗತ್ತಿನಲ್ಲಿರುವ ಎಲ್ಲಾ ಮನುಕುಲದ ಧರ್ಮವು ಶಾಂತಿ ಸಮಾಧಾನವನ್ನೇ ಪ್ರತಿಪಾದಿಸುತ್ತದೆ. ಜನಾಂಗ,ಧರ್ಮ ಯಾವುದಾದರೂ ಮೊದಲು ಮಾನವನಾಗಬೇಕು ಎಂಬ ತತ್ವವನ್ನು ಸಾರಿದ ಮಹಾನ್ ವ್ಯಕ್ತಿತ್ವವಾಗಿದ್ದಾರೆ ಶ್ರೀ ನಾರಾಯಣ ಗುರುಗಳು. ಅದರಂತೆ ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳು ಕೂಡ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಸಹಬಾಳ್ವೆಯನ್ನು ಬಯಸುತ್ತದೆ ಎಂದರು. ಇಂತಹ ಪರಸ್ಪರ ಸೌಹಾರ್ದತೆಯನ್ನು ಸಾರುವ ಕಾರ್ಯಕ್ರಮಗಳ ಆಯೋಜನೆಯಿಂದ ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸಲು ಸಾಧ್ಯ ಎಂದು ಕಾರ್ಯಕ್ರಮಕ್ಕೆ ಶುಭ ಕೋರಿದರು.

 ಕಾರ್ಯಕ್ರಮದಲ್ಲಿ ಎಸ್ ಎನ್ ಡಿ ಪಿ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಜಿಲ್ಲಾ ಡಿಸಿಸಿ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್, ನಾಪೋಕ್ಲು ಶ್ರೀ ಪೊನ್ನ ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಎ.ಕೆ. ಚಂದ್ರನ್, ಪಂಚಾಯತ್ ಸದಸ್ಯ ಇಸ್ಮಾಯಿಲ್ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

 ಕಾರ್ಯಕ್ರಮದಲ್ಲಿ ನಾಪೋಕ್ಲುವಿಭಾಗದಿಂದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಸಾಧನೆಗೈದ ಸಾಧಕರನ್ನು ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ನಾಪೋಕ್ಲು ಪಟ್ಟಣದ ಮಾರುಕಟ್ಟೆ ಅವರಣದಿಂದ ಅಲಂಕೃತ ಮಂಟಪದಲ್ಲಿ ಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಕುಳ್ಳಿರಿಸಿ ಪ್ರಸಿದ್ಧ ಕೇರಳದ ಚಂಡೆ ವಾದ್ಯಗಳೊಂದಿಗೆ ಪಟ್ಟಣದ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಬಳಿಕ ಕಾರ್ಯಕ್ರಮದ ಅಂಗವಾಗಿ ಕೇರಳದ ಪ್ರಸಿದ್ಧ ಮಿಮಿಕ್ರಿ ಕಲಾವಿದರಾದ ಚಾಲಕುಡಿ ರಂಜು ಅವರ ನೇತೃತ್ವದಲ್ಲಿ ಕ್ಯಾಲಿಕೆಟ್ 7 ಬೀಡ್ಸ್ ಆರ್ಕೆಸ್ಟ್ರಾ ತಂಡದಿಂದ ನಡೆದ ರಸಮಂಜರಿ ಕಾರ್ಯಕ್ರಮ ನೋಡುಗರನ್ನು ರಂಜಿಸಿತು.

 ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ. ಸಿ. ಲವ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ, ಆಚರಣೆ ಸಮಿತಿಯ ಅಧ್ಯಕ್ಷ ಶ್ರೀಧರ್,ಹೊದ್ದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್. ಎ. ಹಂಸ, ವಕೀಲರಾದ ಕೋಡಿಮಣಿಯಂಡ ಶರಣ್ ಕುಟ್ಟಪ್ಪ,ಉದ್ಯಮಿ ರಾಜೀವ್ ಭಾಗಮಂಡಲ, ಮನ್ಸೂರ್ ಆಲಿ,ನಾಪೋಕ್ಲು ವಿಎಸ್ಎಸ್ ಬ್ಯಾಂಕ್ ನಿರ್ದೇಶಕ ಅರೆಯಡ ರತ್ನ ಪೆಮಯ್ಯ, ಎಸ್ ಎನ್ ಡಿ ಪಿ ನಿರ್ದೇಶಕ ಟಿಸಿ ರಾಜೀವ್, ಉಪಾಧ್ಯಕ್ಷ ಎಂ ಕೆ,ತಂಗ, ಕಾರ್ಯದರ್ಶಿ ಕಿಶೋರ್, ಸಹಕಾರ್ಯದರ್ಶಿ ಅಜಿತ್, ಸಂಘಟನಾಕಾರ್ಯದರ್ಶಿ ಮನೋಹರ, ಖಜಾಂಚಿ ಸುದೀಶ್, ಆಚರಣ ಸಮಿತಿ ಉಪಾಧ್ಯಕ್ಷ ಸತೀಶ್, ಸುರೇಶ್, ಹರಿದಾಸ್ ಸೇರಿದಂತೆ ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ಸರ್ವ ಸದಸ್ಯರು, ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.

 ಕಾರ್ಯಕ್ರಮದಲ್ಲಿ ಹರ್ಷ ಬಾಲಕೃಷ್ಣ ಪ್ರಾರ್ಥಿಸಿದರು.ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿ, ರವಿ ಓಂಕಾರ್ ಸ್ವಾಗತಿಸಿ, ವಂದಿಸಿದರು.