ಸಂಘದ ಸದಸ್ಯರಿಂದ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ನರಿಯಂದಡ ಗ್ರಾಮದ ಶ್ರೀ ಭಗವತಿ ದೇವಸ್ಥಾನದಲ್ಲಿ ನರಿಯಂದಡ ಸಂಜೀವಿನಿ ಒಕ್ಕೂಟ ಹಾಗೂ ಶ್ರೀ ಅಯ್ಯಪ್ಪ ಸ್ವಸಹಾಯ ಸಂಘದ ವತಿಯಿಂದ ಸ್ವಚ್ಛತಾ ಶ್ರಮದಾನ ನಡೆಸಲಾಯಿತು.
ದೇವಸ್ಥಾನದ ಆವರಣ ಹಾಗೂ ಹೊರಾಂಗಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ಸಂಘದ ಸದಸ್ಯರ ಸೇವಾ ಕಾರ್ಯಕ್ಕೆ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭ ಸಂಜೀವಿನಿ ಒಕ್ಕೂಟದ ಕೋಶಾಧಿಕಾರಿ ಪಾರ್ವತಿ,ಎಲ್ ಸಿಆರ್ ಪಿ ಟಿ. ಆರ್.ನಳಿನಿ,ಕೃಷಿ ಸಖಿ ಅಂಬಿಕಾ, ಪಶುಸಖಿ ಮೀನಾಕ್ಷಿ,ಶ್ರೀಅಯ್ಯಪ್ಪ ಸ್ವಸಹಾಯ ಸಂಘದ ಕಮಲ,ಪುಷ್ಪ ಇದ್ದರು.