ಶನಿವಾರಸಂತೆ ಎಪಿಸಿಎಂಎಸ್ ಗೆ ಆಯ್ಕೆ
admincoorgdaily
ಶನಿವಾರಸಂತೆ:- ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2025-30ನೇ ಸಾಲಿನ ಆಡಳಿತ ಮಂಡಳಿಯ 12 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ 12 ಮಂದಿ ಅಭ್ಯರ್ಥಿಗಳಲ್ಲಿ 7 ಸ್ಪರ್ಧೆಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
.‘ಎ’ ತರಗತಿಯ ಶೇರುದಾರರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಹಾಲಿ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಎಸ್.ಸಿ.ಶರತ್ ಶೇಖರ್, ಜಿ.ಜಿ.ಪರಮೇಶ್, ಎಚ್.ಸಿ.ದೀಪಕ್, ದೇವಾಂಬಿಕ ಮಹೇಶ್, ಕುಮಾರ್ ನಾಯಕ್ ಹಾಗೂ ನೂತನವಾಗಿ ಸ್ಪರ್ಧಿಸಿದ್ದ ಶಶಿಕಲಾ ನಾಗರಾಜ್ ಮತ್ತು ಜಿ.ಬಿ.ಸಂದೀಪ್ ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು.
ಉಳಿದಂತೆ ಸಾಮಾನ್ಯ ಕ್ಷೇತ್ರದಿಂದ 5 ಸ್ಥಾನಗಳಿಗೆ ಮಾತ್ರ ಚುನಾವಣೆಯನ್ನು ನಡೆಸಲಾಗಿತು. ಆದರೆ ಚುನಾವಣೆ ಪ್ರಕ್ರಿಯೆಯಲ್ಲಿ ಆಡಳಿತ ಮಂಡಳಿಯ ಹಾಲಿ ಅಧ್ಯಕ್ಷರಾದ ಡಿ.ಬಿ.ಧರ್ಮಪ್ಪ, ಮಾಜಿ ನಿರ್ದೇಶಕ ಎಸ್.ಜೆ.ರವಿಕುಮಾರ್ ಹಾಗೂ ಹಾಲಿ ನಿರ್ದೇಶಕರಾದ ಬಿ.ಎಸ್.ಮಂಜುನಾಥ್, ಎಸ್.ಎಸ್.ಸಾಗರ್ ಮತ್ತು ಪರಿಶಿಷ್ಠ ಜಾತಿ ಕ್ಷೇತ್ರದ ಹಾಲಿ ನಿರ್ದೇಶಕ ರಾಮಯ್ಯ ಅವರುಗಳು ಚುನಾವಣೆ ಮೂಲಕ ಆಯ್ಕೆಯಾದರು.