ಸ್ಪಂದನ ಜ್ಞಾನ ವಿಕಾಸ ಕೇಂದ್ರದಲ್ಲಿ ಸ್ವ ಉದ್ಯೋಗ ಪ್ರೇರಣಾ ಶಿಬಿರ: ವಿವಿಧ ಕೌಶಲಗಳ ತರಬೇತಿಗೆ ಕರೆ

Jun 14, 2026 - 12:51
 0  160
ಸ್ಪಂದನ ಜ್ಞಾನ ವಿಕಾಸ ಕೇಂದ್ರದಲ್ಲಿ ಸ್ವ ಉದ್ಯೋಗ ಪ್ರೇರಣಾ ಶಿಬಿರ: ವಿವಿಧ ಕೌಶಲಗಳ ತರಬೇತಿಗೆ ಕರೆ

ಮಡಿಕೇರಿ: ಮಡಿಕೇರಿ ತಾಲೂಕಿನ ಮಡಿಕೇರಿ ವಲಯದ ಸ್ಪಂದನ ಜ್ಞಾನ ವಿಕಾಸ ಕೇಂದ್ರದಲ್ಲಿ ಶನಿವಾರ ಸ್ವ ಉದ್ಯೋಗ ಪ್ರೇರಣಾ ಶಿಬಿರ ನಡೆಯಿತು.

ಒಕ್ಕೂಟದ ಅಧ್ಯಕ್ಷೆ ಪಾರ್ವತಿ ಅವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಸ್ವ ಉದ್ಯೋಗ ಕೇಂದ್ರ ಕೂಡಿಗೆಯ ಶ್ರೀಮತಿ ನವ್ಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸದಸ್ಯರಿಗೆ ಸ್ವ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ಫಾಸ್ಟ್ ಫುಡ್ ತಯಾರಿಕೆ, ಟೈಲರಿಂಗ್, ಬ್ಯೂಟಿ ಪಾರ್ಲರ್, ಸಿಸಿ ಕ್ಯಾಮೆರಾ ಅಳವಡಿಕೆ, ಜೂಟ್ ಬ್ಯಾಗ್, ಪೇಪರ್ ಬ್ಯಾಗ್ ಮತ್ತು ಬಟ್ಟೆ ಬ್ಯಾಗ್ ತಯಾರಿಕೆ, ಕೃಷಿ ಉದ್ಯಮ, ಅಗರಬತ್ತಿ ತಯಾರಿಕೆ ಮುಂತಾದ ವಿಷಯಗಳ ಕುರಿತು ವಿವರವಾದ ಮಾರ್ಗದರ್ಶನ ನೀಡಿದರು. ಸ್ವ ಉದ್ಯೋಗ ಸಂಸ್ಥೆಯಿಂದ ಈ ಎಲ್ಲ ಕೌಶಲ ತರಬೇತಿಗಳನ್ನು ನೀಡಲಾಗುವುದು ಹಾಗೂ ಸದಸ್ಯರು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ವಿನೋದ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ, ಸೇವಾ ಪ್ರತಿನಿಧಿ ಹಾಗೂ ಕೇಂದ್ರದ ಸದಸ್ಯರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0