Kodagu

ಶನಿವಾರಸಂತೆ: ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಗಣಪತಿ ತಯಾರಿಸುವ ಸ್ಪರ್ಧೆ

admincoorgdaily

ಶನಿವಾರಸಂತೆ:ಸ್ಥಳೀಯ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ಸ್ನೇಹಿ ಗಣಪತಿಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಅಕ್ಕಿ ಹಿಟ್ಟು, ಅರಿಶಿನ ಹಾಗೂ ಮಣ್ಣು ಗಳನ್ನು ಬಳಸಿ ಪೋಷಕರ ಸಹಾಯದಿಂದ ತಮಗೆ ಸಾಧ್ಯವಾದ ಮಟ್ಟದಲ್ಲಿ ಮಾಡಿಕೊಂಡು ತಂದು ಪ್ರದರ್ಶಿಸಿದರು. ಪರಿಸರದ ಉಳುವಿಗಾಗಿ ಹಾಗೂ ನೀರಿನ ಸಂರಕ್ಷಣೆಗಾಗಿ ಕೆಮಿಕಲ್ ಬಳಸದ ಗಣಪತಿಯನ್ನು ತಯಾರಿಸಿ ಪೂಜಿಸಿ ವಿಸರ್ಜಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಲಾಯಿತು ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಸುಜಾಲಾದೇವಿ ಹಾಗೂ ಶಿಕ್ಷಕ ವರ್ಗ ಉಪಸ್ಥಿತರಿದ್ದರು.