ಶನಿವಾರಸಂತೆ: ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಕಿರಬಿಳಹ ಗ್ರಾಮದವನಲ್ಲ:ಗ್ರಾಮ ಸಮಿತಿಯ ಪದಾಧಿಕಾರಿಗಳಿಂದ ಸ್ಪಷನೆ
admincoorgdaily
ಶನಿವಾರಸಂತೆ:ಬುಧವಾರ ಶನಿವಾರಸಂತೆ ಸಮೀಪದ ಕಿರುಬಿಳಹ ಗ್ರಾಮದಲ್ಲಿ ಕಾಲೇಜುವೊಂದರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಗೆ ಸಂಬಂಧಪಟ್ಟಂತೆ ಅತ್ಯಾಚಾರಕ್ಕೆ ಯತ್ನಿಸಿದ್ದ ಲೋಕೇಶ್ ಅಲಿಯಾಸ್ ಪುಟ್ಟ ಬೇರೆ ಗ್ರಾಮದಿಂದ ಬಂದು ಈ ಗ್ರಾಮದಲ್ಲಿ, ಕಲ್ಪತರು ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದು ಈತ ನಮ್ಮ ಕಿರುಬೀಳಹ ಗ್ರಾಮದವನಲ್ಲ.
ನಮ್ಮ ಗ್ರಾಮ ಹಾಗೂ ಗ್ರಾಮಸ್ಥರು ತಮ್ಮನ್ನು ತಾವು ಕೃಷಿ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡು,ಉತ್ತಮ ಸಂಸ್ಕಾರ,ಸಂಸ್ಕೃತಿ ಹೊಂದಿರುವ ಬೇರೆಬೇರೆ ರೀತಿಯ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಗ್ರಾಮ ಕಿರುಬಿಳಹ.ಆದರೆ ನಮ್ಮ ಗ್ರಾಮದ ಹೆಸರನ್ನು ಹಾಳು ಮಾಡುವ ಇಂತಹವರಿಗೆ ಸೂಕ್ತ ಕಾನೂನು ಶಿಕ್ಷೆ ಆಗಬೇಕು. ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿ ಕಿರುಬೀಳಹ ಗ್ರಾಮದವನು ಎಂದು ಪೊಲೀಸ್ ಠಾಣೆಯಲ್ಲಿ ನಮೂದು ಮಾಡಿಕೊಂಡಿದ್ದಾರೆ.ಆದರೆ ಆತ ನಮ್ಮ ಗ್ರಾಮದವನಲ್ಲ ಎಂದು ಕಿರುಬೀಳಹ ಗ್ರಾಮ ಸಮಿತಿ ಅಧ್ಯಕ್ಷ ಸಂತೋಷ್ ಕೆ. ಡಿ. ಕಾರ್ಯದರ್ಶಿ ಅರವಿಂದ್ ಬಿ. ಎಸ್. ಖಜಾಂಚಿ ಅರುಣ B. S. ಹಾಗೂ ಪ್ರಮುಖರಾದ ಧರ್ಮರಾಜ್ ಕೆ. ಸಿ ,ಶಶಿಕುಮಾರ್, ಪ್ರಕಾಶ್ ಹಾಗೂ ಇತರರು ತಿಳಿಸಿದ್ದಾರೆ.