ಸಿದ್ದಾಪುರ: ಮುನವ್ವಿರುಲ್ ಇಸ್ಲಾಂ ಮದರಸ SKSBV ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಸಿದ್ದಾಪುರ:ಇಲ್ಲಿನ ಮುನವ್ವಿರುಲ್ ಇಸ್ಲಾಂ ಮದರಸ ಎಸ್.ಕೆ.ಎಸ್.ಬಿ.ವಿ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಿದ್ಧಾಪುರ ಜಮಾಅತ್ ಕಾರ್ಯದರ್ಶಿ ಅಬ್ದುರವೂಫ್ ಹಾಜಿ ಅವರ ಧ್ವಜಾರೋಹಣ ನೆರವೇರಿಸಿದರು.
SKSBV ಚೇರ್ಮನ್ ಅಬ್ದುಲ್ ಜಬ್ಬಾರ್ ಫೈಝಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮದರಸದ ಪ್ರಾಂಶುಪಾಲರಾದ ಆರಿಫ್ ಫೈಝಿ ಮಾತನಾಡಿ, ನಮ್ಮ ಭವ್ಯ ಭಾರತ ಚರಿತ್ರೆ ವಿವರಿಸಿ, ನಾವು ಭಾರತೀಯರು ನಮ್ಮ ದೇಶದ ಉನ್ನತಿಗೆ ಎಲ್ಲರೂ ಕೈ ಜೋಡಿಸಿ ಜೀವಿಸಬೇಕೆಂದು ಕರೆ ನೀಡಿ ಉದ್ಘಾಟನೆ ಭಾಷಣ ಮಾಡಿದರು. ಖತೀಬ್ ನೌಫಲ್ ಹುದವಿ ಮುಖ್ಯ ಭಾಷಣ ಮಾಡಿದರು.
S.M.O ಪ್ರಾಂಶುಪಾಲ ಸಿದ್ದೀಕ್ ವಾಫಿ, SKSSF ಕಾರ್ಯದರ್ಶಿ ಆಯಾಸ್, ಕಮಿಟಿ ಸದಸ್ಯ VK ಬಷೀರ್.ಸಂದೇಶ ಭಾಷಣ ಮಾಡಿದರು. ಮೊಯ್ದೀನ್ ಮುಸ್ಲಿಯಾರ್, ಹನೀಫ್ ಮುಸ್ಲಿಯಾರ್, ಕಮಿಟಿ ಕಾರ್ಯದರ್ಶಿ ಅಷ್ಕರ್,SKSSF ಶಾಖೆ ಅಧ್ಯಕ್ಷ ಶರ್ಫುದ್ದೀನ್, SKSBV ಅಧ್ಯಕ್ಷ ಸುಫಿಯಾನ್ ಆಶಿಕ್, ಪ್ರಮುಖರು ಇದ್ದರು SKSBV ಕನ್ವೀನರ್ ಸಹದ್ ಫೈಝಿ ಸ್ವಾಗತಿಸಿ, ಕಾರ್ಯದರ್ಶಿ ನಿಹಾಲ್ ವಂದಿಸಿದರು.