ಸಿದ್ದಾಪುರ:ಮಳೆಗೆ ಗೋಡೆ ಕುಸಿತ: ಬಾಲಕನಿಗೆ ಗಂಭೀರ ಗಾಯ

ಸಿದ್ದಾಪುರ:ಮಳೆಗೆ ಗೋಡೆ ಕುಸಿತ: ಬಾಲಕನಿಗೆ ಗಂಭೀರ ಗಾಯ

ಸಿದ್ದಾಪುರ:-ಸಿದ್ದಾಪುರ ಸುತ್ತಮುತ್ತಲಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಾಫಿ ತೋಟದ ಲೈನ್ ಮನೆ ಒಂದರ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಮೂರು ವರ್ಷದ ಬಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸಿದ್ದಾಪುರ ಸಮೀಪದ ಶಿಲ್ಪಿ ಕಾಫಿ ತೋಟದಲ್ಲಿ ನಡೆದಿದೆ.

ಕರಡಿಗೋಡು ಗ್ರಾಮದ ಶಿಲ್ಪಿ ಎಸ್ಟೇಟ್ ನಲ್ಲಿ ವಾಸವಿರುವ ಜಾರ್ಖಂಡ್ ಮೂಲದ 5 ಮಂದಿ ಕಾರ್ಮಿಕರು ಬೆಳಿಗ್ಗೆ ಎದ್ದು ಕೆಲಸಕ್ಕೆ ತೆರಳಲು ಮನೆಯಿಂದ ಹೊರ ಬಂದ ಸಂದರ್ಭ ಲೈನ್ ಮನೆಯ ಒಂದು ಬದಿ ಗೋಡೆ ಕುಸಿತಗೊಂಡಿದೆ ಮನೆಯಲ್ಲೇ ನಿದ್ರಾ ವ್ಯವಸ್ಥೆಯಲ್ಲಿ ಮಲಗಿದ್ದ ಮೂರು ವರ್ಷದ ಅರ್ಜುನ ಎಂಬ ಮಗುವಿನ ಮೇಲೆ ಮರದ ತುಂಡು ಹಾಗೂ ಗೋಡೆ ಕುಸಿತಗೊಂಡಿದೆ ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಮಗುವನ್ನ ಸ್ಥಳದಲ್ಲಿದ್ದ ಕಾರ್ಮಿಕರು ತಕ್ಷಣ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಗಂಭೀರ ಗಾಯಗೊಂಡ ಮಗುವನ್ನು ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಕಂದಾಯ ಇಲಾಖೆಯ ಅನೀಲ್ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು . ಕಾಫಿ ತೋಟದಲ್ಲಿ ಶಿಥಿಲಗೊಂಡ ಮನೆಯಲ್ಲಿ ವಾಸವಾಗಿದ್ದ ಐವರು ನಿಗದಿತ ಸಮಯಕ್ಕೆ ಮುಂಚಿತವಾಗಿ ಎದ್ದೇಳದಿದ್ದಲ್ಲಿ ಬಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ. ಬಹುತೇಕ ಕಾಫಿ ತೋಟಗಳ ಶಿಥಿಲಗೊಂಡ ಲೈನ್ ಮನೆಗಳಲ್ಲಿಯೇ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದು ವರ್ಷ ಇಡೀ ದುಡಿಸಿಕೊಳ್ಳುವ ಮಾಲೀಕರು ಕನಿಷ್ಠ ಸೌಲಭ್ಯವು ನೀಡದೆ ಲೈನ್ ಮನೆಗಳನ್ನು ದುರಸ್ತಿ ಪಡಿಸದೆ ಅಸಹಾಯಕತೆ ತೋರುತ್ತಿದ್ದು ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಸಂಬಂಧಪಟ್ಟ ಇಲಾಖೆಗಳು ಕಾರ್ಮಿಕರು ವಾಸ ಮಾಡುವ ಲೈನ್ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕ ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ.