ಸಿದ್ದಾಪುರ; ಮುಸ್ಲಿಂ ಅನಾಥಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಮೇ13 ಮತ್ತು ,14ರಂದು ಮಹಾ ಸಮ್ಮೇಳನ

May 12, 2026 - 16:56
 0  165
ಸಿದ್ದಾಪುರ; ಮುಸ್ಲಿಂ ಅನಾಥಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಮೇ13 ಮತ್ತು ,14ರಂದು ಮಹಾ ಸಮ್ಮೇಳನ

ಮಡಿಕೇರಿ: ಸಿದ್ದಾಪುರ ಮುಸ್ಲಿಂ ಅನಾಥಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಮೇ೧೩, ೧೪ರಂದು ಮಹಾ ಸಮ್ಮೇಳನ ನಡೆಯಲಿದೆ ಎಂದು ಅಸೋಸಿಯೇಷನ್ ಸದಸ್ಯ ಬಶೀರ್ ತಿಳಿಸಿದರು.

ಮೇ ೧೩ರಂದು ಅಪರಾಹ್ನ ೩:೩೦ಕ್ಕೆ ಮಖಾಂ ಝಿಯಾರತ್, ರಾತ್ರಿ ೭ಕ್ಕೆ ಸಾರ್ವಜನಿಕ ಸಮ್ಮೇಳನದಲ್ಲಿ ನವಾಸ್ ಮನ್ನಾನಿ ಭಾಷಣ ಮಾಡಲಿದ್ದಾರೆ. ಮೇ ೧೪ರಂದು ಬೆಳಗ್ಗೆ ೧೦ಕ್ಕೆ ಮಹಿಳಾ ಸಮಾವೇಶ, ಸಂಜೆ ೪ಕ್ಕೆ ಪೂರ್ವ ವಿದ್ಯಾರ್ಥಿಗಳ ಸಮ್ಮೇಳನ, ರಾತ್ರಿ ೭ಕ್ಕೆ ಸಮಾರೋಪ ನಡೆಯಲಿದೆ.

ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಗಳ್ ಉದ್ಘಾಟಿಸಲಿದ್ದಾರೆ. ಯು.ಟಿ.ಖಾದರ್, ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಮುಸ್ತಫ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಪ್ರಮುಖರಾದ ಅಬ್ದುಲ್ ರವೂಫ್ ಹಾಜಿ, ಅಸ್ಗರ್ ಆಲಿ, ಜಂಶೀರ್, ಆರೀಫ್ ಫೈಝಿ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0