ಸಿದ್ದಾಪುರ SKSBV ವತಿಯಿಂದ ಸಮಸ್ತ ಪ್ರಾರ್ಥನಾ ಸಂಗಮ ಹಾಗೂ ಜಿಲ್ಲಾ ತಹಿಯ್ಯಾ ಫಂಡ್ ಉದ್ಘಾಟನೆ

ಸಿದ್ದಾಪುರ SKSBV ವತಿಯಿಂದ ಸಮಸ್ತ  ಪ್ರಾರ್ಥನಾ ಸಂಗಮ ಹಾಗೂ ಜಿಲ್ಲಾ ತಹಿಯ್ಯಾ  ಫಂಡ್ ಉದ್ಘಾಟನೆ

ಸಿದ್ದಾಪುರ: ಇಲ್ಲಿನ ಮುನವ್ವಿರುಲ್ ಇಸ್ಲಾಂ ಮದರಸ ಆವರಣದಲ್ಲಿ ಉಮ್ಮರ್ ಫೈಝಿ ಅವರ ಪ್ರಾರ್ಥನೆಯೊಂದಿಗೆ ಜಮಾಅತ್ ಕಾರ್ಯದರ್ಶಿ ರಹೂಫ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ಸಿದ್ದಾಪುರ SKSBV ವತಿಯಿಂದ ಸಮಸ್ತ ಪ್ರಾರ್ಥನಾ ಸಂಗಮ ಹಾಗೂ ಜಿಲ್ಲಾ ತಹಿಯ್ಯಾ ಫಂಡ್ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಸಮಸ್ತ ನಡೆದು ಬಂದ ಹಾದಿಯನ್ನು ವಿವರಿಸಿ S.M O ಪ್ರಾಂಶುಪಾಲರಾದ ಸಿದ್ದೀಕ್ ವಾಫಿ ಕಾರ್ಯಕ್ರಮ ಉದ್ಘಾಟಿಸಿದರು.

ಕೊಡಗು ಜಿಲ್ಲಾ ಜಂಇಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಮದರಸ ಪ್ರಾಂಶುಪಾಲ ಉಸ್ತಾದ್ ಆರಿಫ್ ಫೈಝಿ ಅನುಸ್ಮರಣ ಭಾಷಣ ಮಾಡಿದರು.ಸಮಸ್ತ ನೇತಾರರ ಜೀವನ ಚರಿತ್ರೆ ಮನದಟ್ಟುಮಾಡಿ ಸಮಸ್ತ ಸಮುದಾಯಕ್ಕೆ ನೀಡಿದ ಕೊಡುಗೆ ಬಹಳ ಅಮೂಲ್ಯವಾಗಿದೆ. ಎಲ್ಲರೂ ಸುನ್ನತ್ ಜಮಾಅತ್ ಆದರ್ಶದಲ್ಲಿ ಜೀವಸಬೇಕೆಂದು ಕರೆ ನೀಡಿದರು.

ಮೊಯ್ದೀನ್ ಮುಸ್ಲಿಯಾರ್, ಅಯಾಸ್ SKSSF ಕಾರ್ಯದರ್ಶಿ, SKSBV ಚೇರ್ಮನ್ ಜಬ್ಬಾರ್ ಫೈಝಿ, ಮಾತನಾಡಿದರು. ಸಭೆಯಲ್ಲಿ ಅಹ್ಮದ್ ಯಮಾನಿ, ಜಮಾಅತ್ ಜೊತೆ ಕಾರ್ಯದರ್ಶಿ ಅಷ್ಕರ್, ಮುಸ್ತಫ, ಬಷೀರ್, SKSSF ಅಧ್ಯಕ್ಷ ಸರ್ಫುದೀನ್, SKSBV ಅಧ್ಯಕ್ಷ ಸುಫಿಯಾನ್, ಕಾರ್ಯಕರ್ತರು ಪ್ರಮುಖರು ಉಪಸ್ಥಿತರಿದ್ದರು. ಕೊನೆಯಲ್ಲಿ ಸಂಶುಲ್ ಉಲಮಾ ಮೌಲೀದ್ ಪಾರಾಯಣ ಹಾಗೂ ತಹಿಯ್ಯಾ ಪ್ರಕಾಶನ ಮಾಡಿದರು. ಸಹದ್ ಫೈಝಿ ಸ್ವಾಗತ ಕೋರಿ ಕಾರ್ಯದರ್ಶಿ ನಿಹಾಲ್ ವಂದಿಸಿದರು.