ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಗುಡುಗಳಲೆಯಿಂದ ಶನಿವಾರಸಂತೆ ಬನ್ನಿ ಮಂಟಪದವರೆಗೆ ಮೌನ ಮೆರವಣಿಗೆ

ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ  ಗುಡುಗಳಲೆಯಿಂದ ಶನಿವಾರಸಂತೆ ಬನ್ನಿ ಮಂಟಪದವರೆಗೆ ಮೌನ ಮೆರವಣಿಗೆ

ಶನಿವಾರಸಂತೆ:ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಮೇಲೆ ಅಪಪ್ರಚಾರ ಹಾಗೂ ಕಳಂಕ ತರಲು ಹುನ್ನಾರ ನಡೆಸುತ್ತಿರುವುದನ್ನು ವಿರೋಧಿಸಿ ಹಿಂದೂ ಕಾರ್ಯಕರ್ತರು ಹಾಗೂ ಮಂಜುನಾಥ ಸ್ವಾಮಿ ಪಾದಯಾತ್ರೆ ಸಮಿತಿಯ ಸದಸ್ಯರು ಗುಡುಗಳಲೆಯಿಂದ ಶನಿವಾರಸಂತೆ ಬನ್ನಿ ಮಂಟಪದ ವರೆಗೆ ಮೌನ ಮೆರವಣಿಗೆ ನಡೆಸಿದರು.

ನಂತರ ಪ್ರತಿಭಟನ ಕಾರರನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಮುಖಂಡ ಎಸ್ ಎನ್ ರಘು ಇಂದು ಭಯೋತ್ಪಾದನೆ ಸಂಘಟನೆಯ ಸಂಬಂಧ ಹಾಗೂ ಈ ಹಿಂದೆ ಅನೇಕ ಭಯೋತ್ಪದಕ ಚಟುವಟಿಕೆಯಲ್ಲಿ ತೊಡಗಿದ್ದ ಮಟ್ಟಣ್ಣ ಹಾಗೂ ತಿಮರೋಡಿ ಸೇರಿದಂತೆ ಇನ್ನಿತರರು ನಿರಂತರ ಹಿಂದೂ ದೇವಾಲಯ ಹಾಗೂ ಹಿಂದೂ ಹೋರಾಟಗಾರರನ್ನು ತುಳಿಯಲು ಪ್ರಯತ್ನ ಪಡುತ್ತಿದ್ದಾರೆ ಇದಕ್ಕೆ ಹಣ ಯಾರು ನೀಡುತ್ತಿದ್ದಾರೆ, ಇವರನ್ನು ಯಾರು ಬೆಂಬಲಿಸುತ್ತಿದ್ದಾರೆ ಎಂದು ತನಿಖೆ ಆಗಬೇಕು ಎಂದರು.

ಹಿಂದೂ ಮುಖಂಡ ಬಿ. ಎಸ್ ಅನಂತ್ ಕುಮಾರ್ ಮಾತನಾಡಿ ಸರ್ಕಾರದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳುತ್ತಾರೆ ಧರ್ಮಸ್ಥಳ ದ ವಿರುದ್ಧ ಷಡ್ಯಂತರ ನಡೆದಿದೆ ಎಂದು ಸತ್ಯ ಆಗಿದ್ದರೆ ತನಿಖೆ ಆಗಬೇಕು. ಸರ್ಕಾರವೇ ಎಸ್ ಐ ಟಿ ರಚಿಸಿ ಇದೀಗ ಷಡ್ಯಂತರ ಎನ್ನುತ್ತಿದೆ. ನಾವು ಹಿಂದೂಗಳು ಇಷ್ಟು ದಿನ ಸುಮ್ಮನೆ ಇದ್ದೆವು ಇನ್ನೂ ಸುಮ್ಮನೆ ಇರಲು ಸಾಧ್ಯವಿಲ್ಲ ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಎಂದರು. ತಕ್ಷಣ ಮಧ್ಯಂತರ ವರದಿ ಸಾರ್ವಜನಿಕ ಮುಂದೆ ಇಡಲಿ ಎಂದರು. ಇದೇ ಸಂದರ್ಭದಲ್ಲಿ ರಕ್ಷಿತ್ ಮಾತನಾಡಿದರು ಪ್ರತಿಭಟನೆಯಲ್ಲಿ ಪಾದಯಾತ್ರೆ ಸಮಿತಿಯ ಹೇಮಂತ್, ಮಹೇಶ್, ಪುನೀತ್, ದಿನೇಶ್, ದಿವಾಕರ್, ಚಂದ್ರಕಾಂತ್,ಯತೀಶ್, ಮಂಜುನಾಥ್,ಕಿಶೋರ್,ತನ್ಮಯ್ ಮುಂತಾದವರಿದ್ದರು.