ಸೋಮವಾರಪೇಟೆ: ಅಂಗಡಿಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಸರ್ವಾಧಿಕಾರಿ ಧೋರಣೆ,ತಾರತಮ್ಯ ನೀತಿ: ಪಟ್ಟಣ ಪಂಚಾಯಿತಿ ವಿರುದ್ಧ ವರ್ತಕರ ಆಕ್ರೋಶ
ಸೋಮವಾರಪೇಟೆ:- ಇಲ್ಲಿನ ಪಟ್ಟಣ ಪಂಚಾಯಿತಿ ಅಂಗಡಿಮಳಿಗೆ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಕೆಲವು ಅಂಗಡಿಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಸರ್ವಾಧಿಕಾರಿ ದೋರಣೆ ತಳೆದಿದ್ದು,ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆಂದು ಕೆಲವು ವರ್ತಕರು ಅಸಮಾದಾನ ವ್ಯಕ್ತ ಪಡಿಸಿದ್ದಾರೆ. ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆ ಹರಾಜು ಪ್ರಕರಣ ಆರಂಭದಿಂದಲೂ ಒಂದಲ್ಲಾ ಒಂದು ವಿವಾದಕ್ಕೆ ಕಾರಣವಾಗಿ ನ್ಯಾಯಾಲಯ ಮೆಟ್ಟಿಲೇರಿ ಇಂದಿಗೂ ಸುದ್ದಿಯಾಗಿರುವುದು ಪಂಚಾಯಿತಿ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ.
ತರಾತುರಿಯಲ್ಲಿ ಹರಾಜು ಪ್ರಕ್ರಿಯೆ ಮುಗಿಸಿ,ಕೆಲವು ವರ್ತಕರಿಗೆ ಕಾಲಾವಕಾಶವು ಕೊಡದಂತೆ ಅಂಗಡಿಗಳನ್ನು ತಕ್ಷಣವೇ ಖಾಲಿಮಾಡಿಸಿದ ಆಡಳಿತ ಮಂಡಳಿ,ಕೆಲವರನ್ನು ಇಂದಿಗೂ ಖಾಲಿಮಾಡಿಸದೆ ಇಂದಿಗೂ ವ್ಯಾಪಾರ ನಡೆಸಲು ಅವಕಾಶಮಾಡಿಕೊಟ್ಟಿರುವುದು ಒಂದೆಡೆಯಾದರೆ ಕೆಲವು ಸದಸ್ಯ ಹಾಗೂ ಸಿಬ್ಬಂದಿಯ ವೈಯುಕ್ತಿಕ ದ್ವೇಷದಿಂದ ಒಂದು ಅಂಗಡಿಮಳಿಗೆಗೆ ಭಾನುವಾರ ಬೀಗ ಜಡಿದು ಸೀಲ್ ಮಾಡುವಮೂಲಕ ಸರ್ವಾಧಿಕಾರಿತನ ಮೆರೆದಿದ್ದಾರೆ. ಖಾಸಗಿ ಬಸ್ ನಿಲ್ದಾಣದಲ್ಲಿ ಎಲ್ಲಾ ಅಂಗಡಿಗಳನ್ನು ಖಾಲಿ ಮಾಡಿಸಿರುವ ಪಟ್ಟಣ ಪಂಚಾಯಿತಿ ಪರಿಶಿಷ್ಟ ಜಾತಿಗೆ ಮೀಸಲಿಟ್ಟು ಹರಾಜಾಗಿರುವ ಬೀಡಾ ಅಂಗಡಿಯನ್ನು ಈ ವರೆಗೆ ಖಾಲಿಮಾಡಿಸದೆ ಇಂದಿಗೂ ವ್ಯಾಪಾರಮಾಡಲು ಅವಕಾಶ ಮಾಡಿಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಬರೆ ಕುಸಿಯುವ ಭೀತಿಯಿಂದ ಭಾನುವಾರ ಖಾಸಗಿ ಬಸ್ಸ್ ನಿಲ್ದಾಣದ 5 ಅಂಗಡಿಗಳನ್ನು ತಹಸೀಲ್ದಾರ್ ಖಾಲಿ ಮಾಡಿಸಿದ ಸಂದರ್ಭ ಕೆಲವರು ಒಳಒಪ್ಪಂದ ಮಾಡಿಕೊಂಡು ಹರಾಜಾಗಿರುವ ಅಂಗಡಿ ಮಳಿಗೆಯಲ್ಲಿಯೇ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಲು ಮುಂದಾಗಿದ್ದು ನಂತರ ಕೆಲವು ಸದಸ್ಯರ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಹಿನ್ನಡೆಯಾಗಿದೆ. ಆದರೆ ಭಾನುವಾರ ಪಂಚಾಯತಿ ವ್ಯಾಪ್ತಿಯಲ್ಲಿ ಅದು ಬಸ್ ನಿಲ್ದಾಣದಲ್ಲಿ ಇಷ್ಟೆಲ್ಲಾ ಬೆಳವಣಿಗೆಯಾದರೂ ನಗರದ ಪ್ರಥಮ ಪ್ರಜೆಗೆ ಯಾವುದೇ ಮಾಹಿತಿ ಇಲ್ಲದೆ ಆರಾಮವಾಗಿದ್ದಾರೆನ್ನಲಾಗಿದೆ. ಚುನಾವಣೆ ಹತ್ತಿರ ಬರುತಿರುವ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರನ್ನು ಕತ್ತಲಲ್ಲಿ ಇಟ್ಟು ಕೆಲವರ ಮಾತುಕೇಳಿ ಅಧಿಕಾರಿಗಳು ಅಧಿಕಾರ ನಡೆಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಒಟ್ಟಿನಲ್ಲಿ ಸೋಮವಾರಪೇಟೆ ಪಟ್ಟಣಪಂಚಾಯುತಿಯಲ್ಲಿ ಅಂಧ ದರ್ಬಾರ್ ನೆಡೇಯುತಿದೆಯೆಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.