ಸೋಮವಾರಪೇಟೆ: ಕಾರ್ಗಿಲ್ ವಿಜಯ್ ದಿನದ ಅಂಗವಾಗಿ ಸೈನಿಕರಿಗೆ ಗೌರವ ಸಮರ್ಪಣೆ
ಸೋಮವಾರಪೇಟೆ:- ಕಾರ್ಗಿಲ್ ವಿಜಯ ದಿನದ ಅಂಗವಾಗಿ ಇಲ್ಲಿನ ಹಿಂದೂಜಾಗರಣ ವೇದಿಕೆ ವತಿಯಿಂದ ಬಲಿದಾನ ಗೈದ ಸೈನಿಕರಿಗೆ ಗೌರವ ಸಲ್ಲಿಸಿದರು. ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ದಿನದ ಮಹತ್ವ ಕುರಿತು ಮಾತನಾಡಿದರು. ಈ ಸಂದರ್ಭ ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು , ಹಿಂದೂ ಜಾಗರಣ ವೇಧಿಕೆ ಕಾರ್ಯಕರ್ತರು ಹಾಗು ದೇಶಭಕ್ತರು ಭಾಗವಹಿಸಿದರು.