ಸೋಮವಾರಪೇಟೆ: ನೀರಿನ ಸ್ಟೋರೇಜ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಮೃತಹೇಹ ಪತ್ತೆ
ಸೋಮವಾರಪೇಟೆ:- ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಖಚಿತಗೊಂಡಿದೆ. ಪುಷ್ಪಗಿರಿ ಸಮೀಪದ ಹೈಡಲ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತಿದ್ದ ಹಣಕೋಡು ಗ್ರಾಮದ ಚಿದಾನಂದ (27)ಎಂಬ ಯುವಕ ಭಾನುವಾರ ರಾತ್ರಿ ತಾನು ಕೆಲಸ ಮಾಡುತಿದ್ದ ಸ್ಥಳದಲ್ಲಿಯೇ ನೀರಿಗೆ ದುಮುಕಿದ್ದು ಸಿಸಿ ಟಿವಿ ಯಲ್ಲಿ ಸೆರೆಯಾಗಿದ್ದು,ನಾನು ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿ ತನ್ನ ಸ್ನೇಹಿತರಿಗೆ ಮೆಸೇಜ್ ಮಾಡಿದ್ದಾರೆಂದು ವೃತ್ತ ನಿರೀಕ್ಷಕ ಮುದ್ದುಮಾದೇವ ತಿಳಿಸಿದ್ದಾರೆ.ಸೋಮವಾರ ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದಾರಾದರೂ ಪ್ರಯೋಜನವಾಗಿರಲಿಲ್ಲ.
ಮಂಗಳವಾರ ಸ್ಥಳೀಯರು ಹುಡುಕಾಟ ನಡೆಸಿದ್ದು ಮದ್ಯಾಹ್ನದವೇಳೆಗೆ ವಿದ್ಯುತ್ ಉತ್ಪಾದನಾ ಘಟಕ ದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಹೊಳೆಯ ಮಧ್ಯೆ ಮರದ ಬುಡಕ್ಕೆ ಸಿಕ್ಕಿಕೊಂಡ ಮೃತದೇಹ ಪತ್ತೆಯಾಗಿದೆ.ಹರಿಯುವ ನೀರಿನ ರಭಸವನ್ನು ಲೆಕ್ಕಿಸದೆ ಸ್ಥಳೀಯ ಗ್ರಾಮಸ್ಥರು ಮೃತದೇಹವನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಶವನು ಹೊರ ತೆಗೆಯಲು ಹರಸಾಸ ಪಡುತ್ತಿರುವ ಬೀದಳಿ ಗ್ರಾಮದ ಕೆಲ ಯುವಕರಗಳು ತನ್ನ ಪ್ರಾಣವನ್ನೇ ಮುಡಿಪಿಟ್ಟು ಶವವನ್ನು ಮೇಲೆತ್ತಲು ಪ್ರಯತ್ನ ಪಟ್ಟವರು ಬೀದಳಿ ಪುಟ್ಟ ಪ್ರವೀಣ್ ಕಿರಣ್ ರವಿ ವಿನೋದ್ ದಿಕ್ಷಿತ್ ಬೀದಳಿ ಗಿರೀಶ್ ಮತ್ತು ಬೀದಳಿ ಗ್ರಾಮಸ್ಥರು ಇನ್ನು ಅನೇಕ ಯುವಕರು ಕೂಡ ಭಾಗವಹಿಸಿದ್ದರು.