ಸೋಮವಾರಪೇಟೆ: ಪಡಿತರ ಅಕ್ಕಿ ಕಾಳಸಂತೆ ಪಾಲು,ಗೃಹೋಪಯೋಗಿ ಸಿಲಿಂಡರ್ ವಾಣಿಜ್ಯ ಬಳಕೆ ಕ್ರಮಕ್ಕೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ

ಸೋಮವಾರಪೇಟೆ: ಪಡಿತರ ಅಕ್ಕಿ ಕಾಳಸಂತೆ ಪಾಲು,ಗೃಹೋಪಯೋಗಿ ಸಿಲಿಂಡರ್ ವಾಣಿಜ್ಯ ಬಳಕೆ ಕ್ರಮಕ್ಕೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ

ಸೋಮವಾರಪೇಟೆ:-ಪಡಿತರ ಅಕ್ಕಿ ಕಾಳಸಂತೆ ಪಾಲು,ಗೃಹೋಪಯೋಗಿ ಸಿಲಿಂಡರ್ ವಾಣಿಜ್ಯ ಬಳಕೆ ಕ್ರಮಕ್ಕೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸೋಮವಾರಪೇಟೆ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಸಭೆಯು ಅಧ್ಯಕ್ಷ ಜಿ.ಎಂ ಕಾಂತರಾಜು ಅಧ್ಯಕ್ಷತೆಯಲ್ಲಿ ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆಯಿತು.

ಅನುಪಾಲನಾ ವರದಿ ಮಂಡನೆಯ ಸಂದರ್ಭ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯ ಪರವಾಗಿ ಸಿಬ್ಬಂದಿಯೋರ್ವರು ಮಾಹಿತಿ ನೀಡಲು ಮುಂದಾದರು ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಕಾಂತರಾಜು ಅಧಿಕಾರಿ ತಾಲೂಕಿನ ಅಂಗನವಾಡಿಗಳಿಗೆ ಭೇಟಿ ನೀಡುತಿಲ್ಲಾ,ಪರಿಶೀಲನೆ ನಡೆಸುತ್ತಿಲ್ಲ ಅಲ್ಲದೆ ಸಭೆಗಳಲ್ಲಿ ಸುಳ್ಳು ವರದಿಗಳನ್ನು ಕೊಡುತ್ತಿದ್ದಾರೆ ಎನ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತಿರುವುದು ಆತಂಕಕಾರಿ ವಿಚಾರ ಅಲ್ಲದೆ ಆಹಾರ ಪೋಲಾಗುತ್ತಿದೆ ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್ ಧ್ವನಿಗೂಡಿಸಿದರು. ಸಂಬಂಧಿಸಿದ ಅಧಿಕಾರಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿದರು. ಬಡಜನರ ಅನುಕೂಲಕ್ಕಾಗಿ ಸರ್ಕಾರ ಪಡಿತರ ಅಕ್ಕಿ ವಿತರಿಸಿದರೆ ಅದನ್ನು ಕಾಳಸಂತೆಯಲ್ಲಿ ಮಾರಾಟಮಾಡಲಾಗುತ್ತಿದೆ ನಾವು ಏನು ಮಾಡುವುದು ಅಂದು ಅಧ್ಯಕ್ಷರು ಅಸಹಾಯಕತೆ ವ್ಯಕ್ತಪಡಿಸಿದರು.

ಆದರೂ ಅಕ್ಕಿ ಮಾರಾಟ ಹಾಗೂ ಗೃಹಬಳಕೆ ಅಡುಗೆ ಅನಿಲವನ್ನು ಹೋಟೆಲ್,ಕ್ಯಾಂಟೀನ್,ಬೇಕರಿಗಳಲ್ಲಿ ವಾಣಿಜ್ಯ ಬಳಕೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕು,ಆಹಾರ ಇಲಾಖೆ ಅಧಿಕಾರಿಗಳು ಆಗಾಗ ತೆರಳಿ ಪರಿಶೀಲನೆ ನಡೆಸಬೇಕೆಂದು ಸೂಚಿಸಿದರು. ಇದೇ ಸಂದರ್ಭ ತುರ್ತು ಆರೋಗ್ಯ ಚಿಕಿತ್ಸೆಯ ಸಲುವಾಗಿ 4 ಮಂದಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಯಿತು.ವಿವಿಧ ಇಲಾಖೆಯ ಪ್ರಗತಿಪರಿಶೀಲನೆ ನಡೆಸಿ ಅಗತ್ಯ ಕ್ರಮ ಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಸಭೆಯಲ್ಲಿ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಸದಸ್ಯ ಸುಂದರ್,ತಾಲೂಕು ಸಮಿತಿಯ ಸದಸ್ಯರುಗಳಾದ ಎಸ್.ಎಂ.ಡಿಸಿಲ್ವಾ, ವಿ.ಸಂದೀಪ್, ಸಿ.ಬಿ.ಅಬ್ಬಾಸ್,ಬಿ.ಟಿ.ರಂಗಸ್ವಾಮಿ,ಹೆಚ್. ಬಿ.ರಾಜಪ್ಪ,ಡಿ.ಪಿ.ಬೋಜಪ್ಪ,ಎಸ್. ಪಿ .ರಾಜು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ತಿತರಿದ್ದರು.