Kodagu

ಸೋಮವಾರಪೇಟೆ: ರಕ್ಷಾಬಂಧನ ಆಚರಣೆ

admincoorgdaily

ಸೋಮವಾರಪೇಟೆ:ಸಹೋದರತ್ವ ಹಾಗೂ ಬಾಂಧವ್ಯದಕೊಂಡಿ ರಕ್ಷಾಬಂಧನಾ ಎಂದು ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತ ವಿರುಪಾಕ್ಷ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಕರ್ತರಿಗೆ ರಕ್ಷೆ ಕಟ್ಟಿ ,ಶುಭ ಹಾರೈಸಿದ ಅವರು ಹೆಣ್ಣುಮಕ್ಕಳು ಸಹೋದರ ಭಾವನೆಯಿಂದ ರಕ್ಷೆ ಕಟ್ಟಿ ಸಹೋದರರಿಂದ ಆಶೀರ್ವಾದ,ರಕ್ಷಣೆ ಕೋರುವ ಸಂಪ್ರದಾಯ ನಮ್ಮದೇಶದಲ್ಲಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಈ ಸಂದರ್ಭ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿತಾಲೂಕು ಪಂಚಾಯತ್ ಮಾಜಿಸದಸ್ಯೆ ತಂಗಮ್ಮ,ಹಾನಗಲ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಣುಕಾ, ಮಂಡಲ ಬಿಜೆಪಿ ಕಾರ್ಯದರ್ಶಿ ಇಂದಿರಾ ಸಾಲಿಯಾನ,ಪ್ರಮುಖರಾದ ವರಲಕ್ಷ್ಮಿ ಸಿದ್ದೇಶ್ವರ,ಸುಮತಿ ಉಪಸ್ತಿತರಿದ್ದರು. ನಂತರ ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಸಿಬ್ಬಂದಿಗಳಿಗೂ ರಕ್ಷೆ ಕಟ್ಟಿ ಶುಭಹಾರೈಸಿದರು.