ಸೋಮವಾರಪೇಟೆ: ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯದ 3ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ

Feb 15, 2026 - 19:09
 0  170
ಸೋಮವಾರಪೇಟೆ: ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯದ 3ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ

ಸೋಮವಾರಪೇಟೆ: ಪಟ್ಟಣಕ್ಕೆ ಸಮೀಪದ ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಆಲೆಕಟ್ಟೆ ರಸ್ತೆಯ ಸಾರ್ವಜನಿಕ ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯದ 3ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಮತ್ತು ಶ್ರೀನಿವಾಸ ಕಲ್ಯಾಣ ಉತ್ಸವ ಶ್ರದ್ದಾಭಕ್ತಿಯಿಂದ ಶುಕ್ರವಾರ ಸಂಜೆ ನಡೆಯಿತು.

 ಬೆಳಿಗ್ಗೆ 9 ಗಂಟೆಗೆ ಸ್ವಾಮಿಗೆ ಶಲಾತತ್ವಾಧಿಸ ಹೋಮ, ನವತಪ್ರಧಾನ, ಕಲಾ ಕಳಶ ಪ್ರತಿಷ್ಠೆ, ಕಲಾಭಿಷೇಕ, ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಿತು. ಸುತ್ತಮುತ್ತಲಿನ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಂಡಿದ್ದರು. ಸಂಜೆ 5ಗಂಟೆಗೆ ಸ್ವಾಮಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು.

ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಂ.ಸುಬ್ರಮಣ್ಯ, ಗೌರವಾಧ್ಯಕ್ಷ ಬಿ.ಡಿ.ಗೋವಿಂದ, ಉಪಾಧ್ಯಕ್ಷರುಗಳಾದ ಸಿ.ಕೆ.ಮೋಹನ್, ಮಹೇಶ್ ತಿಮ್ಮಯ್ಯ, ಕಾರ್ಯದರ್ಶಿ ಟಿ.ಎ.ಪ್ರಕಾಶ್, ಸಹ ಕಾರ್ಯದರ್ಶಿ ಎಂ.ಜಿ.ಪ್ರವೀಣ್, ಖಜಾಂಚಿ ಎಂ.ಬಿ.ಉಮೇಶ್ ಮತ್ತಿತರ ಪದಾಧಿಕಾರಿಗಳ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು,ಅನ್ನದಾನ ನಡೆಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0