ಸೋಮವಾರಪೇಟೆ:ಭುವನ ಮಂದಾರ ರೈತ ಉತ್ಪಾದಕ ಸ್ವಸಹಾಯ ಸಂಸ್ಥೆಯ ವಾರ್ಷಿಕ ಮಹಾಸಭೆ
ಸೋಮವಾರಪೇಟೆ:ಭುವನ ಮಂದಾರ ರೈತ ಉತ್ಪಾದಕ ಸ್ವಸಹಾಯ ಸಂಸ್ಥೆಯ ವಾರ್ಷಿಕ ಮಹಾಸಭೆ ಅಧ್ಯಕ್ಷ ಎಸ್.ಎಂ.ಡಿಸಿಲ್ವಾ ಅವರ ಅಧ್ಯಕ್ಷತೆಯ ಸಫಾಲಿ ಹಾಲ್‌ನಲ್ಲಿ ಸೋಮವಾರ ನಡೆಯಿತು.
ರೈತರಿಂದ ರೈತರಿಗಾಗಿ ಪ್ರಾರಂಭಿಸಿರುವ ಸ್ವಸಹಾಯ ಸಂಸ್ಥೆ 2018ರಲ್ಲಿ ಪ್ರಾರಂಭವಾಗಿದೆ. 513 ಸದಸ್ಯರಿದ್ದು ರೈತ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿsಸುವುದು ಉತ್ತಮ ಬೆಲೆ ದೊರಕಿಸುವುದರೊಂದಿಗೆ ರೈತರಿಗೆ ಅಗತ್ಯ ತಂತ್ರಜ್ಞಾನದ ಮಾಹಿತಿ ಮೂಲಭೂತ ಸೌಕರ್ಯಗಳು ಹಾಗು ಸಂಪನ್ಮೂಲ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಇದೆ ಸಂದರ್ಭ ಇಂಡಿಯನ್ ಕಾಫಿ ಕ್ಲೈಮೆಟ್ ರೆಸಿಲೈಂಟ್ ಲ್ಯಾಂಡ್‌ಸ್ಕೇಪ್ ಪ್ರೋಗ್ರಾಂ(ಐಸಿಸಿಆರ್‌ಎಲ್) ವತಿಯಿಂದ ರೈತರಿಗೆ ಕಾಫಿ, ಕಾಳುಮೆಣಸು ಕೃಷಿಯ ಬಗ್ಗೆ ತರಬೇತಿ ಕಾರ್ಯಗಾರ ನಡೆಯಿತು.
ಬೆಂಗಳೂರಿನ ಎಸ್‌ಎಸ್‌ಆರ್‌ಡಿಪಿ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಬಿ.ಗಿರೀಶ್ ಮಣ್ಣು ಪರೀಕ್ಷೆ, ದ್ರವರೂಪದ ರಾಸಾಯನಿಕ ಗೊಬ್ಬರಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ನಬಾರ್ಡ್ ಡಿಡಿಎಂ ರಮೇಶ್‌ಬಾಬು, ಕೋರಮಂಡಲ ಇಂಟರ್ ನ್ಯಾಷನಲ್ ಸಂಸ್ಥೆಯ ವಿಜ್ಞಾನಿ ಡಾ.ರಾಜಶೇಖರ್, ರೈತ ಉತ್ಪಾದಕರ ಸಂಸ್ಥೆಯ ನಿರ್ದೇಶಕರುಗಳಾದ ಪಿ.ಡಿ.ಮೋಹನ್‌ದಾಸ್, ಮಸಗೋಡು ಲೋಕೇಶ್, ಕವಿತಾ ವಿರೂಪಾಕ್ಷ, ಚಂದ್ರಿಕಾ ಕುಮಾರ್, ಎಂ.ಬಿ.ಮಂದಣ್ಣ, ಕೆ.ಟಿ.ರಾಜಶೇಖರ್, ಎ.ಪಿ.ಸುಬ್ಬಯ್ಯ ಸಿ.ಇ.ಒ. ಎನ್.ಬಿ.ಪೂಜಾಶ್ರೀ, ಇಕಾಮ್ ಸಂಸ್ಥೆಯ ತಾರ ಇದ್ದರು.