ಸೋಮವಾರಪೇಟೆ;ತೆನೆ ಬರಿತ ಗಾಂಜಾ ಮಾರಾಟ,ಇಬ್ಬರ ಬಂಧನ

Mar 25, 2026 - 22:55
 0  1.2k
ಸೋಮವಾರಪೇಟೆ;ತೆನೆ ಬರಿತ ಗಾಂಜಾ ಮಾರಾಟ,ಇಬ್ಬರ ಬಂಧನ

ಸೋಮವಾರಪೇಟೆ: ಹೊರ ಜಿಲ್ಲೆಯಿಂದ ತೆನೆ ಬರಿತ ಗಾಂಜಾವನ್ನು ತರಿಸಿ ಪಟ್ಟಣ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಅಬಕಾರಿ ಇಲಾಖೆ ಯಶಸ್ವಿಯಾಗಿದೆ.

 ನಗರದ ಕರ್ಕಳ್ಳಿ ಬಾಣೆ ನಿವಾಸಿಗಳಾದ ಎಸ್‌.ಡಿ.ಯಶವಂತ ಹಾಗೂ ಎಸ್‌.ಡಿ.ಚೇತನ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ದಿನದ ಬೆಳಗಿನ ಹೊತ್ತಿನಲ್ಲೇ ಗಾಂಜಾ ಮಾರಾಟಕ್ಕೆ ತೊಡಗಿದ್ದರೆಂಬ ಮಾಹಿತಿ ಆಧರಿಸಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು.

ದಾಳಿ ವೇಳೆ ಆರೋಪಿಗಳು ಸ್ವತಃ ಗಾಂಜಾ ಸೇವನೆ ಮಾಡುತ್ತಿರುವುದು ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಧಿಕಾರಿಗಳು ಅವರ ಬಳಿಯಿಂದ ಸುಮಾರು ೩೩೯ ಗ್ರಾಂ ತೆನೆ ಬರಿತ ಗಾಂಜಾ ಹಾಗೂ ಮಾರಾಟಕ್ಕೆ ಬಳಸಲಾಗುತ್ತಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

 ಬಂಧಿತ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆಯನ್ನು ಅಬಕಾರಿ ಇಲಾಖೆ ಮುಂದುವರಿಸಿದೆ. ಈ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಕೆ.ಬಿ.ರಾಜೇಂದ್ರ, ಪೇದೆ ಎಚ್‌.ಎ. ರಾಜು ಹಾಗೂ ವಾಹನ ಚಾಲಕರಾದ ಮಧುಸೂದನ್ ಅವರುಗಳು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0