ಮೇ 15ರಿಂದ 17ರವರೆಗೆ ಕೊಡವ ಭಾಷಿಕ ಸಮುದಾಯಗಳ ಕೂಟದಿಂದ ಕ್ರೀಡಾಕೂಟ

May 12, 2026 - 16:51
 0  313
ಮೇ 15ರಿಂದ 17ರವರೆಗೆ ಕೊಡವ ಭಾಷಿಕ ಸಮುದಾಯಗಳ ಕೂಟದಿಂದ ಕ್ರೀಡಾಕೂಟ

ಮಡಿಕೇರಿ: ಕೊಡವ ಭಾಷಿಕ ಸಮುದಾಯಗಳ ಕೂಟದಿಂದ ಮೇ ೧೫ರಿಂದ ೧೭ರವರೆಗೆ ಮೂರ್ನಾಡಿನ ಬಾಚೇಟ್ಟಿರ ದಿ.ಲಾಲು ಮುದ್ದಯ್ಯ ಮೈದಾನದಲ್ಲಿ ೨೧ ಕೊಡವ ಭಾಷಿಕ ಜನಾಂಗದ ಕ್ರೀಡಾಕೂಟ ನಡೆಯಲಿದೆ ಎಂದು ಅಧ್ಯಕ್ಷ ಡಾ.ಮೇಚೀರ ಸುಭಾಷ್ ನಾಣಯ್ಯ ತಿಳಿಸಿದರು.

 ಮೇ೧೫ರಂದು ಬೆಳಗ್ಗೆ ೧೦ಗಂಟೆಗೆ ೨೧ ಸಮಾಜಗಳ ಅಧ್ಯಕ್ಷರಿಂದ ಉದ್ಘಾಟನೆಯಾಗಲಿದೆ. ಮೇ ೧೫ರಿಂದ ೧೭ರವರೆಗೆ ಕ್ರಿಕೆಟ್, ಹಗ್ಗಜಗ್ಗಾಟ ನಡೆಯಲಿದೆ.

 ಮೇ೧೭ರಂದು ಬೆಳಗ್ಗೆ ೮ಕ್ಕೆ ೨ ಕಿ.ಮೀ ಮ್ಯಾರಥಾನ್ ನಡೆಯಲಿದೆ. ಮೇ೧೭ರಂದು ಬೆಳಗ್ಗೆ ೧೧ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರದ ಎ.ಎಸ್.ಪೊನ್ನಣ್ಣ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಶಾಸಕ ಡಾ.ಮಂತರ್‌ಗೌಡ, ಸಂಸದ ಯದುವೀರ್ ಒಡೆಯರ್, ಎಂಎಲ್‌ಸಿ ಮಂಡೇಪಂಡ ಸುಜಾ ಕುಶಾಲಪ್ಪ ಅವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭ ೨೧ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೂಟದ ಪ್ರಮುಖರಾದ ಕೂಡಂಡ ಸಾಬ ಸುಬ್ರಮಣಿ, ಉದಯ್ ಮಾದಪ್ಪ, ಗಗನ್, ಬೋಪಯ್ಯ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0